Site icon Vistara News

ಗಣೇಶೋತ್ಸವ ಚಂದಾ ಹೆಸರಲ್ಲಿ ಮನೆಗೆ ಹೋಗಿ ಕಿರಿಕಿರಿ ಮಾಡಿದ್ರೆ ಕ್ರಿಮಿನಲ್‌ ಕೇಸ್‌ ಹಾಕಲೂ ಅವಕಾಶ

ganeshotsav

ಬೆಂಗಳೂರು: ರಾಜಧಾನಿಯ ಕೆಲವೆಡೆ ಗಣೇಶೋತ್ಸವದ ಹೆಸರಿನಲ್ಲಿ ಚಂದಾ ವಸೂಲಿ ಜೋರಾಗಿದೆ. ಕೆಲವರು ಕೊಟ್ಟಿದ್ದನ್ನು ಪಡೆದು ಹೋದರೆ ಇನ್ನು ಕೆಲವರು ಇಂತಿಷ್ಟು ಕೊಡಲೇ ಬೇಕು ಎಂದು ಡಿಮ್ಯಾಂಡ್‌ ಮಾಡುತ್ತಿರುವ ಬಗ್ಗೆ ದೂರು ಬಂದಿವೆ. ಕೊಡದಿದ್ದರೆ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುವುದು, ಮನೆ ಮುಂದೆ ನಿಂತು, ಬೈದು ಅಪಮಾನ ಮಾಡುವ ಘಟನೆಗಳೂ ನಡೆದಿವೆ.

ಬೆಂಗಳೂರಿನ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್‌ ಅಧಿಕಾರಿಗಳು ಈಗ ಅಲರ್ಟ್‌ ಆಗಿದ್ದಾರೆ. ನಗರ ಪೊಲೀಸ್‌ ಆಯುಕ್ತರು ಈಗ ಬಗ್ಗೆ ಡಿಸಿಪಿಗಳ ಸಭೆ ಕರೆದು ಇಂಥ ಘಟನೆಗಳಿಗೆ ಅವಕಾಶವಿಲ್ಲದಂತೆ ಗಣೇಶೋತ್ಸವ ಸಮಿತಿಗಳಿಗೆ ಎಚ್ಚರಿಕೆ ನೀಡುವಂತೆ, ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಚಂದಾ ಹೆಸರಿನಲ್ಲಿ ಕಂಡ ಕಂಡವರು ಮನೆಗಳಿಗೆ ಬರುತ್ತಿದ್ದಾರೆ. ಮನೆಯವರು ಹಣ ಕೊಟ್ಟು ಕೊಟ್ಟು ಸೋಲುತ್ತಿದ್ದಾರೆ. ಕೆಲವೊಮ್ಮೆ ಅದೇ ಏರಿಯಾದ ಚಂದಾ ವಸೂಲಿಗಾರರು ಬಂದರೆ, ಕೆಲವು ಕಡೆ ಎಲ್ಲೆಲ್ಲಿಂದಲೋ ಬಂದು ವಸೂಲಿ ಮಾಡುತ್ತಿದ್ದಾರೆ. ಇವರೆಲ್ಲ ನಿಜಕ್ಕೂ ಗಣಪತಿ ಇಟ್ಟು ಪೂಜೆ ಮಾಡುತ್ತಾರಾ ಅಥವಾ ಸುಮ್ಮನೆ ಜನರಿಂದ ದುಡ್ಡು ಪಡೆದು ವಂಚನೆ ಮಾಡುತ್ತಾರಾ ಎನ್ನುವ ಬಗ್ಗೆಯೂ ಸ್ಪಷ್ಟತೆ ಇಲ್ಲ.

ಇದರ ನಡುವೆ ಮನೆಗಳ ಬಾಗಿಲು ಬಡಿದು ನಿಗದಿತ ಮೊತ್ತವನ್ನೇ ಕೊಡಬೇಕು, ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್‌ ಮಾಡುವುದು, ಕೊಡದಿದ್ದರೆ ಬೆದರಿಕೆ ಹಾಕುವುದು ಮೊದಲಾದ ವಿದ್ಯಮಾನಗಳು ನಡೆದಿವೆ. ಇವುಗಳನ್ನು ಗಮನಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಆರೋಪ ಬಂದರೆ ಆಯಾ ನಿರ್ದಿಷ್ಟ ಗಣೇಶೋತ್ಸವ ಸಮಿತಿಗಳ ಆಯೋಜಕರನ್ನು ಕರೆದು ವಾರ್ನಿಂಗ್‌ ನೀಡಲಾಗಿದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಈ ಆಪಾದನೆ ಜಾಸ್ತಿ ಕೇಳಿಬಂದರೆ ಆ ಭಾಗದ ಎಲ್ಲ ಆಯೋಜಕರನ್ನು ಠಾಣೆಗೆ ಕರೆಸಿಕೊಂಡು ಎಚ್ಚರಿ ನೀಡುವಂತೆ ಸೂಚಿಸಲಾಗಿದೆ.

ಪೊಲೀಸರ ಸೂಚನೆಗಳೇನು?
-ಯಾರೂ ಕೂಡಾ ಮನೆ ಮನೆಗೆ ಹೋಗಿ ಹಣಕ್ಕಾಗಿ ಡಿಮ್ಯಾಂಡ್‌ ಮಾಡಬಾರದು.
– ದೇವರ ಮೇಲಿನ ಭಕ್ತಿಯಿಂದ ಎಷ್ಟು ಕೊಟ್ಟುತ್ತಾರೋ ಅದನ್ನು ಸ್ವೀಕರಿಸಬೇಕು.
– ಇಷ್ಟೇ ಹಣ ಕೊಡಬೇಕು ಎಂದು ಡಿಮ್ಯಾಂಡ್‌ ಮಾಡಿದರೆ ಕ್ರಿಮಿನಲ್‌ ಕೇಸ್‌
-ರಾತ್ರಿಯ ವೇಳೆಯಲ್ಲಿ ಹೋಗಿ ಮನೆಯ ಬಾಗಿಲನ್ನು ಬಡಿಯಬಾರದು
– ಹಣ ಕೊಟ್ಟಿಲ್ಲ ಅಂದ್ರೆ ನೋಡ್ಕೋತೀನಿ ಅನ್ನೋರಿಗೆ ಖಡಕ್ ಎಚ್ಚರಿಕೆ

Exit mobile version