Site icon Vistara News

Congress Ticket: ಉತ್ತರ ಕನ್ನಡದ ಇಬ್ಬರು ಮಾಜಿ ಶಾಸಕ, ಒಬ್ಬರು ಮಾಜಿ ಸಚಿವರಿಗೆ ಟಿಕೆಟ್ ಘೋಷಣೆ

satish sail mankala vaidya uttar kannada

#image_title

ಕಾರವಾರ: ವಿಧಾನಸಭಾ ಚುನಾವಣೆಗೆ 124 ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಪ್ರಕಟಣೆ ಹೊರಡಿಸಿದೆ. ಈ ಪೈಕಿ ಉತ್ತರ ಕನ್ನಡದ ಇಬ್ಬರು ಮಾಜಿ ಶಾಸಕರಿಗೆ ಹಾಗೂ ಒಬ್ಬರು ಮಾಜಿ ಸಚಿವರಿಗೆ ಟಿಕೆಟ್ (Congress Ticket) ಘೋಷಣೆ ಮಾಡಲಾಗಿದೆ.

ಭಟ್ಕಳಕ್ಕೆ ಮಾಜಿ ಶಾಸಕ ಮಂಕಾಳ ವೈದ್ಯ ಅವರನ್ನು ಅಂತಿಮಗೊಳಿಸಲಾಗಿದೆ. ವೈದ್ಯ ಅವರು 2018ರ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕ ಸುನೀಲ್ ನಾಯ್ಕ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿ 5,930 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಅದಕ್ಕೂ ಪೂರ್ವ, 2013ರಲ್ಲಿ ಅವರು ಪಕ್ಷೇತರರಾಗಿ ಕಣಕ್ಕಿಳಿದು 37,319 ಮತಗಳನ್ನು ಪಡೆದು ಗೆಲುವು ಕಂಡಿದ್ದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ

ಇನ್ನು ಕಾರವಾರಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ಅವರನ್ನು ಘೋಷಿಸಲಾಗಿದೆ‌. ಸೈಲ್ ಕೂಡ 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಆದರೆ 2018ರ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಮೂರನೇ ಸ್ಥಾನಕ್ಕೆ ಕುಸಿದಿದ್ದರು.

ಇದನ್ನೂ ಓದಿ: Anushka Sharma: ʻಮಿಸೆಸ್ ಕೊಹ್ಲಿʼ ಅಂದಾಕ್ಷಣ ಅನುಷ್ಕಾ ಶರ್ಮಾ ʻರಿಲ್ಯಾಕ್ಸ್‌ʼ ಅಂದಿದ್ಯಾಕೆ?

ಹಳಿಯಾಳದಿಂದ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಟಿಕೆಟ್ ನೀಡಲಾಗಿದ್ದು, ಇದು ಅವರ 10ನೇ ಚುನಾವಣೆಯಾಗಿದೆ. 9 ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಎಂಟು ಬಾರಿ ಕ್ಷೇತ್ರದ ಶಾಸಕರಾಗಿರುವ ಅವರು, ಈ ಬಾರಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: Viral News: ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ ಹಣ ಅಣ್ಣನ ಮದುವೆಗೆ ಬಳಕೆ; ಅಪ್ಪ-ಅಮ್ಮನ ವಿರುದ್ಧವೇ ಕೇಸ್‌ ದಾಖಲಿಸಿದ ಪುತ್ರಿ!

ಇನ್ನು ಶಿರಸಿ, ಯಲ್ಲಾಪುರ ಹಾಗೂ ಕುಮಟಾ ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಬಾಕಿ ಇದ್ದು, ಎರಡನೇ ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ. ಉಳಿದ ಮೂರು ಕ್ಷೇತ್ರಗಳ ಪೈಕಿ ಕುಮಟಾ ಕ್ಷೇತ್ರದ ಟಿಕೆಟ್ ಯಾರ ಪಾಲಾಗಲಿದೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ಇದೀಗ ಎರಡನೆಯ ಪಟ್ಟಿಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಇದನ್ನೂ ಓದಿ: Covid-19 Cases: ದೇಶದಲ್ಲಿ ಮತ್ತೆ ಕೊರೊನಾ ಆತಂಕ; 146 ದಿನಗಳಲ್ಲೇ ಗರಿಷ್ಠ ಮಟ್ಟದ ಕೊರೊನಾ ಕೇಸ್​ ದಾಖಲು

Exit mobile version