ಕೊಪ್ಪಳ: ಕೊಪ್ಪಳದ ಬಸರಿಹಾಳ , ಬಿಜಕಲ್ ಬಳಿಕ ಈಗ ಗಾವರಾಳ ಗ್ರಾಮದಲ್ಲೂ ವಾಂತಿ, ಭೇದಿಯಿಂದ (Contaminated Water) ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿ ಸುಮಾರು 35 ಮಂದಿ ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ.
ವಾಂತಿ, ಭೇದಿ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಅಸ್ವಸ್ಥಗೊಂಡವರನ್ನು ಚಿಕಿತ್ಸಾ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಗ್ರಾಮಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೀವ ಬಿಟ್ಟಿದ್ದ ಬಾಲಕಿ
ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ, ಭೇದಿಯಿಂದ ಬಾಲಕಿಯೊಬ್ಬಳು (Contaminated Water) ಮೃತಪಟ್ಟಿದ್ದಳು. ನಿರ್ಮಲಾ ಈರಪ್ಪ ಬೆಳಗಲ್ (10) ಎಂಬಾಕೆಗೆ ಜೂ.7ರ ರಾತ್ರಿ ತೀವ್ರ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಳು. ನಿರ್ಮಲಾಳನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ತೀವ್ರ ಅನಾರೋಗ್ಯದಿಂದ ಉಸಿರು ಚೆಲ್ಲಿದ್ದಳು. ಬಿಜಕಲ್ ಗ್ರಾಮದಲ್ಲಿ ಇಲ್ಲಿಯವರೆಗೂ 45 ಜನರು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ: Fraud Case: ಡೇಟಿಂಗ್ ಆ್ಯಪ್‌ನಲ್ಲಿ ಅನಿರುದ್ಧ್ ಆಗಿ ಬದಲಾದ ಮುದಾಸಿರ್; ಎಲ್ಲವನ್ನೂ ಮುಗಿಸಿ ಕಾಸೂ ಪಡೆದ!
ಹಸುಳೆ, ವೃದ್ಧೆಯೂ ಬಲಿ
ಕಳೆದ ಜೂನ್ 5ರಂದು ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು (Contaminated water) ಸೇವಿಸಿ 9 ತಿಂಗಳ ಹಸುಳೆ ಸೇರಿ 60 ವರ್ಷದ ವೃದ್ಧೆ ವಾಂತಿ, ಭೇದಿಯಿಂದ ಮೃತಪಟ್ಟಿದ್ದರು. ಬಸರಿಹಾಳ ಗ್ರಾಮದಲ್ಲಿ ಕಾಲರಾ ಸೋಂಕು (Cholera disease) ಹೆಚ್ಚಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಆರೋಗ್ಯ ಸುರಕ್ಷತಾ ಹಿತದೃಷ್ಟಿಯಿಂದ ಮೂರು ದಿನಗಳ ರಜೆಯನ್ನೂ ಘೋಷಣೆ (holiday announced) ಮಾಡಲಾಗಿತ್ತು. ಕೊಪ್ಪಳದ ಬಹುತೇಕ ಕಡೆಗಳಲ್ಲಿ ಗ್ರಾಮಸ್ಥರು ಅಸ್ವಸ್ಥಗೊಳ್ಳುತ್ತಿದ್ದು, ಆತಂಕ ಹೆಚ್ಚಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ