Site icon Vistara News

Rain News | ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ: ಕೊಚ್ಚಿ ಹೋದ ರಸ್ತೆ, ಶಾಲೆಗಳಿಗೆ ರಜೆ ಘೋಷಣೆ

Rain News

ಚಿಕ್ಕಮಗಳೂರು : ಕಾಫಿನಾಡು ಮಲೆನಾಡು ಭಾಗದಲ್ಲಿ ಮಳೆ (Rain News) ಮುಂದುವರಿದಿದೆ. ಹೆಗ್ಗಾರು ಕೂಡಿಗೆಯಲ್ಲಿ ರಸ್ತೆ ಕೊಚ್ಚಿ ಹೋಗಿದ್ದು (ಆ.12) ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ ತಾಲೂಕಿನ ಶಾಲೆಗಳಿಗೆ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಿಸಲಾಗಿದೆ.

ಕೊಪ್ಪ ತಾಲೂಕಿನ ಹೆಗ್ಗಾರುಕೂಡಿಗೆ ಗ್ರಾಮ ಹಾಗೂ ಮೇಗೂರು, ಕೊಗ್ರೆ, ತಲವಾನೆ ಸೇರಿ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿದೆ. ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ವಿದ್ಯಾರ್ಥಿಗಳು, ಜನಸಾಮಾನ್ಯರು ಪರದಾಟ ಪಡುವಂತಾಗಿದೆ.

PWD ಇಂಜಿನಿಯರ್‌ರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಅಂಗನವಾಡಿಯಿಂದ ಹತ್ತನೇ ತರಗತಿವರೆಗೆ ತಹಶೀಲ್ದಾರ್ ನಾಗರಾಜ್ ಅವರು ರಜೆ ಘೋಷಿಸಿದ್ದಾರೆ.

ಇದನ್ನೂ ಓದಿ | Rain News | ರಾಜ್ಯಾದ್ಯಂತ ಇನ್ನೂ 48 ಗಂಟೆ ಭಾರಿ ಮಳೆ; ಕರಾವಳಿ, ಉತ್ತರ ಒಳನಾಡಲ್ಲಿ ಅಬ್ಬರ ಸಾಧ್ಯತೆ!

Exit mobile version