ಮಂಗಳೂರು: ಕರಾವಳಿಯಲ್ಲಿ ಹಿಜಾಬ್ ವಿವಾದ ಒಂದೆಡೆಯಾದರೆ ಇನ್ನೊಂದೆಡೆ ಮತಾಂತರ ಗಲಾಟೆ ಮತ್ತೆ ಮುನ್ನೆಲೆಗೆ ಬಂದಿದೆ. ಮಂಗಳೂರಿನ ಕಡಬ ತಾಲೂಕಿನ ಕೊಲ್ಯಾಣ ಎಂಬ ಗ್ರಾಮದಲ್ಲಿರುವ ಮೋರ್ಯ ಎಂಬ ಧ್ಯಾನ ಮಂದಿರ ಮತಾಂತರ ದಂಧೆಯಲ್ಲಿ (Conversion in Mangalore) ತೊಡಗಿಕೊಂಡಿದೆ ಎಂದು ಹಿಂದೂ ಜಾಗರಣ ವೇದಿಕೆ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. ಅದರ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ದಾಳಿ ಕೂಡ ನಡೆಸಿದ್ದಾರೆ.
ಒಂದು ಅಕ್ರಮ ಕಟ್ಟಡದಲ್ಲಿ ಈ ಮೋರ್ಯ ಹೆಸರಿನ ಧ್ಯಾನಮಂದಿರವಿದೆ. ಆದರೆ ಅದು ಧ್ಯಾನಮಂದಿರವಲ್ಲ, ಮತಾಂತರದ ಅಡ್ಡ. ಇಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಅಮಾಯಕ ಹಿಂದೂಗಳನ್ನು ಮತಾಂತರ ಮಾಡುತ್ತಿವೆ. ಅದಕ್ಕೆ ಹೆಚ್ಚಾಗಿ ಶಿವಮೊಗ್ಗ-ಶಿಕಾರಿಪುರದ ಜನರೇ ಬಲಿಪಶುಗಳಾಗುತ್ತಿದ್ದಾರೆ. ನಮ್ಮ ರಾಜ್ಯದವರಷ್ಟೇ ಅಲ್ಲ, ಹೊರ ರಾಜ್ಯದ ಕೆಲ ಹಿಂದೂಗಳೂ ಇಲ್ಲಿಗೆ ಬರುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಸಮಗ್ರ ತನಿಖೆಯಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ರವಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಕೂಡ ಧ್ಯಾನಮಂದಿರದ ಬಳಿ ಭೇಟಿ ನೀಡಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅಧಿಕೃತ ಜಾರಿ
ಮತಾಂತರವೆಂಬುದು ಬಹಳ ಹಿಂದಿನಿಂದ ಇರುವ ಒಂದು ಪಿಡುಗು. ಇಷ್ಟಪಟ್ಟು ಅನ್ಯ ಧರ್ಮಗಳಿಗೆ ಮತಾಂತರ ಆಗುವವರ ಸಂಖ್ಯೆ ಕಡಿಮೆ. ಆದರೆ ಕ್ರಿಶ್ಷಿಯನ್ ಮಿಷಿನರಿಗಳು ಹಿಂದೂ ಧರ್ಮದ ಹಿಂದುಳಿದ ವರ್ಗಗಳನ್ನು ಟಾರ್ಗೆಟ್ ಮಾಡುತ್ತವೆ. ಅವರಿಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತವೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿದೆ. ರಾಜ್ಯದಲ್ಲಿ ಮತಾಂತರ ತಡೆಯಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನೂ ಜಾರಿಗೊಳಿಸಿದೆ.
ಈ ಕಾಯ್ದೆಯ ಅನ್ವಯ ಬಲವಂತವಾಗಿ, ಆಮಿಷವೊಡ್ಡಿ ಯಾರನ್ನೂ ಮತಾಂತರ ಮಾಡುವ ಹಾಗಿಲ್ಲ. ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಬಲವಂತವಾಗಿ ಮತಾಂತರ ಮಾಡುವವರಿಗೆ 3-10 ವರ್ಷದವರೆಗೆ ಜೈಲು ಶಿಕ್ಷೆ, 50 ಸಾವಿರದವರೆಗೆ ದಂಡ ವಿಧಿಸಬಹುದು. ಹಾಗೇ, ಉಳಿದವರನ್ನು ಬಲವಂತದಿಂದ ಮತಾಂತರ ಮಾಡಿದರೆ, ಮೂರರಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ.ದಂಡ ವಿಧಿಸಬಹುದು. ಅದರಲ್ಲೂ ಸಾಮೂಹಿತಕ ಮತಾಂತರ ಮಾಡಿದರೆ, 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ | LOVE JIHAD| ಲವ್ ಜಿಹಾದ್‌ಗೆ ಕುಂದಾಪುರದ ಹಿಂದೂ ಯುವತಿ ಬಲಿ