ಬೆಳಗಾವಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ದಂಪತಿ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಅಮಿತ್ ದೇಸಾಯಿ (32) ಲತಾ ದೇಸಾಯಿ(26) ವಿದ್ಯುತ್ ಆಘಾತಕ್ಕೆ ಸ್ಥಳದಲ್ಲೇ ಮೃತಪಟ್ಟವರು.
ದಂಪತಿ ಜಮೀನಿನಲ್ಲಿ ಕ್ರಿಮಿನಾಶಕ ಸಿಂಪಡಣೆ ವೇಳೆ ಅಮಿತ್ ದೇಸಾಯಿಗೆ ವಿದ್ಯುತ್ ತಂತಿ ತಗುಲಿತ್ತು. ಅವರನ್ನು ರಕ್ಷಿಸಲು ಹೋದ ಪತ್ನಿ ಲತಾ ಅವರಿಗೂ ವಿದ್ಯುತ್ ತಗುಲಿದೆ. ಆಘಾತಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಂಪತಿಯ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಪರಿಕ್ಷೆ ನಡೆಸಲಾಯಿತು. ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಮುಗಿಲು ದುರ್ದೈವಿಗಳ ಆಕ್ರಂದನ.
ದಾರಿ ಬಿಡಿ ಎಂದಿದ್ದಕ್ಕೆ ಅಟ್ಟಾಡಿಸಿ ಕಲ್ಲು ಎತ್ತಿಹಾಕಿದ ಭೂಪ!
ತುಮಕೂರು: ಇಲ್ಲಿನ ಪಾವಗಡ ತಾಲೂಕಿನ ನಾಗಮಲ ಮಡಿಕೆ ತಿಮ್ಮಮ್ಮನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಅಟ್ಟಾಡಿಸಿದ್ದಾನೆ. ಮಾತ್ರ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿರುವ (assault Case) ಘಟನೆ ನಡೆದಿದೆ. ಸುಬ್ಬಯ್ಯ ಎಂಬಾತ ಅಕ್ಕಮ್ಮ ಮೇಲೆ ದಾಳಿ ಹಲ್ಲೆ ಮಾಡಿದ್ದಾನೆ.
ಇವರಿಬ್ಬರ ಹೊಡೆದಾಟ ಬಡಿದಾಟಕ್ಕೆ ಕಾರಣವಾಗಿದ್ದು ರಸ್ತೆ ಬಂದ್ ವಿಚಾರ. ಸಾರ್ವಜನಿಕರು ಓಡಾಡುವ ದಾರಿಯಲ್ಲಿ ಸುಬ್ಬಯ್ಯ ಕಲ್ಲು ಹಾಕಿ ಬಂದ್ ಮಾಡಿಬಿಟ್ಟಿದ್ದ. ತಿಮ್ಮಮ್ಮನಹಳ್ಳಿಯಿಂದ ಉಪ್ಪಾರಹಳ್ಳಿಗೆ ಈ ದಾರಿ ಸಂಪರ್ಕ ಕಲ್ಪಿಸುತ್ತೆ.
ಇದನ್ನೂ ಓದಿ : Vijayanagara News: ಕಾಡು ಹಂದಿಗಳ ಹಾವಳಿ ನಿಯಂತ್ರಿಸಿ, ಬೆಳೆಗೆ ರಕ್ಷಣೆ ಒದಗಿಸಲು ರೈತರ ಒತ್ತಾಯ
ಇದೇ ವೇಳೆ ದಾರಿಯಲ್ಲಿ ಬಂದ ಅಕ್ಕಮ್ಮ ದಾರಿ ಬಿಡುವಂತೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ದಾರಿ ಬಿಡದೆ ಸುಬ್ಬಯ್ಯ ರೇಗಿದ್ದಾನೆ. ಇದೆ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಮಾತು ಜಗಳಕ್ಕೆ ತಿರುಗಿ ಅದು ವಿಕೋಪಕ್ಕೆ ಮುಟ್ಟಿದೆ. ಸಿಟ್ಟಿಗೆದ್ದ ಸುಬ್ಬಯ್ಯ, ಜಮೀನಿನಲ್ಲಿ ಇರುವ ಸೈಜುಗಲ್ಲು ಎತ್ತಿ ಹಾಕಲು ಮುಂದಾಗಿದ್ದಾನೆ.
ಕಲ್ಲು ಎಸೆಯುವಾಗ ಅಕ್ಕಮ್ಮ ಅದೃಷ್ಟವಶಾತ್ ಬಚಾವ್ ಆಗಿದ್ದು, ಅಕ್ಕಮ್ಮರ ಸೊಂಟ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಾಳು ಅಕ್ಕಮ್ಮಳನ್ನು ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ತಿರುಮಣಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಇವರಿಬ್ಬರ ಕಿತ್ತಾಟ, ಬಡಿದಾಟ ಅಲ್ಲೆ ಇದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.