Site icon Vistara News

ಕಾನೂನು ಉಲ್ಲಂಘನೆ ಆರೋಪ; ಸಿದ್ದರಾಮಯ್ಯಗೆ ಕೋರ್ಟ್‌ ಸಮನ್ಸ್

ಸಿದ್ದರಾಮಯ್ಯ

ಬೆಂಗಳೂರು : ಮೇಕೆದಾಟು ಪಾದಯಾತ್ರೆ ವೇಳೆ ಕಾನೂನು ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಯಯ್ಯಗೆ ಮೇ 24ರಂದು ಕೋರ್ಟ್‌ಗೆ ಹಾಜರಾಗಲು ಸೂಚಿಸಿ ನ್ಯಾಯಾಲಯ ಸಮನ್ಸ್‌ ನೀಡಿದೆ. 42ನೇ ಹೆಚ್ಚುವರಿ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದಿಂದ ಈ ಸಮನ್ಸ್‌ ಜಾರಿ ಮಾಡಲಾಗಿದೆ.

ಕೊರೋನಾ ಸಮಯದಲ್ಲಿ ಸಾಮಾನ್ಯರಿಗೆ ಮಾತ್ರ ಸೀಮಿತವಾಗಿದ್ದ ಮಾರ್ಗಸೂಚಿಗಳನ್ನು ಅನೇಕ ರಾಜಕಾರಣಿಗಳು ಪಾಲನೆ ಮಾಡುತ್ತಿರಲಿಲ್ಲ ಇದೇ ವೇಳೆಯಲ್ಲಿ ಮೇಕೆದಾಟು ಯೋಜನೆ ಜಾರಿಗಾಗಿ ಒತ್ತಾಯಿಸಿ ಕಾಂಗ್ರೆಸ್‌ನಿಂದ ಜ.9ರಿಂದ ಮೇಕೆದಾಟು-ಬೆಂಗಳೂರು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದರಿಂದ ಕಾಂಗ್ರೆಸ್‌ ನಾಯಕರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿತ್ತು. ಕೊನೆಗೆ ಹೈಕೊರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಬಳಿಕ ಪಾದಯಾತ್ರೆಗೆ ತಡೆ ಬಿದ್ದು, ರಾಮನಗರ ಠಾಣೆಯಲ್ಲಿ 20ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಾಗಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ಹಾಜರಾಗುವಂತೆ ಸಿದ್ದರಾಮಯ್ಯ ಅವರಿಗೆ ಸಮನ್ಸ್‌ ನೀಡಲಾಗಿದೆ.

ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ನಂತರ ಸ್ಥಳಿತಗೊಂಡಿದ್ದ ಮೇಕೆದಾಟು ಯಾತ್ರೆಯನ್ನು ಫೆ.27ಕ್ಕೆ ಪುನಾರಂಭ ಮಾಡಲಾಯಿತು. ಮಾರ್ಚ್‌ 3ರಂದು ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶದೊಂದಿಗೆ ಪಾದಯಾತ್ರೆ ಕೊನೆಗೊಂಡಿತು.

ಇದನ್ನೂ ಓದಿ | ರಾಜ್ಯದಲ್ಲೀಗ 150+ ಜಪ: BJP, CONGRESS ನಡುವೆ JDS ನಡೆ ವಿಭಿನ್ನ

Exit mobile version