ಬೆಂಗಳೂರು : ದೇಶದೆಲ್ಲೆಡೆ ನಿಧಾನವಾಗಿ ಕೊರೊನಾ ಪ್ರಕರಣಗಳು ಏರುತ್ತಿರುವಂತೆ ರಾಜ್ಯದಲ್ಲಿಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನ ದಾಸರಹಳ್ಳಿ ವಲಯದ 2 ಶಾಲೆಗಳಲ್ಲಿ 31 ವಿದ್ಯಾರ್ಥಿಗಳಿಗೆ ಹಾಗೂ ಪೀಣ್ಯ ಎರಡನೇ ಹಂತದ ಖಾಸಗಿ ಶಾಲೆಯ 6ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಕೊರೊನಾ (Covid news) ಪ್ರಕರಣಗಳು ಕಂಡು ಬಂದಿವೆ.
ಇದನ್ನೂ ಓದಿ | ಇಂದಿನಿಂದ ಶಾಲೆ ಆರಂಭ: ಆರತಿ ಎತ್ತಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಕರು
ಪೀಣ್ಯ ಎರಡನೇ ಹಂತದ ಖಾಸಗಿ ಶಾಲೆಯ 6ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದ್ದರೆ, ಜೂನ್ 9ರಂದು ರಾಜಗೋಪಾಲ್ ನಗರದ ಖಾಸಗಿ ಶಾಲೆಯ 4 ಮತ್ತು 5 ತರಗತಿಯ ಒಟ್ಟು 21 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಎರಡು ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ಬಿಬಿಎಂಪಿ ಆರೋಗ್ಯಾಧಿಕಾರಿಗಳಿಂದ ಇಂದು ಕೋವಿಡ್ ಟೆಸ್ಟ್
ನಗರದ ರಾಜಗೋಪಾಲ ನಗರ, ಪೀಣ್ಯ 2ನೇ ಹಂತದ ಖಾಸಗಿ ಪ್ರೌಢಶಾಲೆಯಲ್ಲಿ 21 ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲ್ಲೇ, ದಾಸರಹಳ್ಳಿ ವಲಯದ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಾಲೆಯಲ್ಲಿಂದು ಮತ್ತಷ್ಟು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಿದ್ದು, ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳೊಂದಿಗೆ ಸಂಪರ್ಕಹೊಂದಿದ್ದ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶ್ಯಸ್ತ ಕೊಟ್ಟು ಟೆಸ್ಟಿಂಗ್ ನಡೆಸಲಿದ್ದಾರೆ.
ಯಾವ್ಯಾವ ತರಗತಿಯಲ್ಲಿ ಎಷ್ಟು ಮಕ್ಕಳಿಗೆ ಪಾಸಿಟಿವ್
6 ನೇ ತರಗತಿಯ 7 ಮಕ್ಕಳು
7ನೇ ತರಗತಿಯ 3ಮಕ್ಕಳು
8 ನೇ ತರಗತಿಯ 3 ಮಕ್ಕಳು
9ನೇ ತರಗತಿಯ 2 ಮಕ್ಕಳು
10 ನೇ ತರಗತಿಯ ಓರ್ವ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್..
ಶಾಲೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳಿದ್ದು, 200 ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಿದಾಗ, 21 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಕ್ಕಳೊಂದಿಗೆ ಸೇರ ಸಂಪರ್ಕ ಹೊಂದಿರುವ ಶಾಲೆಯ ಶಿಕ್ಷಕರಿಗೂ ತಪಾಸಣೆ ನಡೆಸಿದ್ದು, ಸದ್ಯ ರಿಪೋರ್ಟ್ ನೆಗಟಿವ್ ಬಂದಿದೆ.
ಶಾಲೆಯಲ್ಲಿ ಸೋಂಕು ಪತ್ತೆಯಾಗಿರುವುದು ನಂಗೆ ಗೊತ್ತಿಲ್ಲ; ಸಚಿವ ಸುಧಾಕರ್
ದಾಸರಹಳ್ಳಿ ವಲಯದ ಶಾಲೆಗಳಲ್ಲಿ ಮಕ್ಕಳಿಗೆ ಸೋಂಕು ಹರಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರು ಆರೋಗ್ಯ ಸಚಿವ ಸುಧಾಕರ್, ಈ ಬಗ್ಗೆ ನಂಗೆ ಮಾಹಿತಿ ಬಂದಿಲ್ಲ, ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತಿವಿ. ಇನ್ನು, ಸೋಂಕು ಬಂದ ಕೂಡಲೇ ಶಾಲೆ ಕ್ಲೋಸ್ ಮಾಡಬೇಕು, ಕೊರೊನಾ ಪ್ರೊಟೋಕಾಲ್ ಪಾಲನೆ ಮಾಡಬೇಕು. ಇದು ಓಮಿಕ್ರಾನ್ ಉಪತಳಿಯಾಗಿದ್ದು, ಹೊಸ ಒಮಿಕ್ರಾನ್ ಉಪ ತಳಿ ನಮ್ಮಲ್ಲಿ ಪತ್ತೆ ಆಗಿಲ್ಲ. ಹೀಗಾಗಿ, ಮಕ್ಕಳಿಗೆ ಸೋಂಕು ಬಂದ ಕೂಡಲೇ ಗಾಬರಿಯಾವುದು ಬೇಡ, ಅದರಿಂದ ಏನು ಆಗಲ್ಲ. ಇಲಾಖೆಯ ಅಧಿಕಾರಿಗಳೊಂದಿಗೆ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಎಷ್ಟು ಲಸಿಕೆ ಆಗಿದೆ ಎಂಬ ಮಾಹಿತಿ ಪಡೆಯುತ್ತಿದ್ದೇವೆ. ಈಗಾಗಲೇ 15 ವರ್ಷ ಮೇಲ್ಪಟ್ಟರಿಗೂ ಲಸಿಕೆ ಆಗ್ತಿದೆ ಅಂತ ತಿಳಿಸಿದ್ದಾರೆ
ಇದನ್ನೂ ಓದಿ | ಕೋವಿಡ್ ಸಮಯದಲ್ಲಿ ಬೆದರಿಕೆ ಎಂದು ಈಗ ದೂರು: ಅಧಿಕಾರಿಗಳ ವಿರುದ್ಧ ಪ್ರಕರಣ