ಕೋಲಾರ: ಕೆಜಿಎಫ್ ತಾಲೂಕಿನ ವೆಂಕಟಾಪುರ ಮಜರಾ ಗುಟ್ಟಹಳ್ಳಿ ಗ್ರಾಮದಲ್ಲಿ ಕಳೆದೊಂದು ತಿಂಗಳಿಂದ ಸರ್ಕಾರಿ ಗೋಶಾಲೆಯಲ್ಲಿ ಹಸು ಹಾಗೂ ಕರುಗಳ ಮೃತಪಡುತ್ತಿದ್ದು, ನಿಗೂಢ ರೋಗಗಳಿಗೆ (Cow Disease) ತುತ್ತಾಗುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.
ಕಳೆದೊಂದು ತಿಂಗಳಿಂದ ಹತ್ತು ಹಸು ಹಾಗೂ ಕರುಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾನುವಾರುಗಳಿಗೆ ಕಾಯಿಲೆಗಳು ಕಾಣಿಸಿಕೊಂಡರೂ ಚಿಕಿತ್ಸೆ ಕೊಡದೆ ಅಧಿಕಾರಿಗಳು ಹಾಗೂ ಪಶುವೈದ್ಯರು ನಿರ್ಲ್ಯಕ್ಷ್ಯ ತಾಳಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಮೃತ ಹಸು ಮತ್ತು ಕರುಗಳನ್ನು ಸಂಸ್ಕಾರ ಮಾಡದೆ ಗ್ರಾಮದ ಪಕ್ಕದಲ್ಲಿರುವ ನೀಲಿಗಿರಿ ತೋಪಿನಲ್ಲಿ ಬಿಸಾಡಲಾಗಿದೆ.
ಗೋಶಾಲೆ ನಿರ್ವಹಣೆ ಮಾಡುವ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಗೋಶಾಲೆಯಲ್ಲಿ ಸುಮಾರು 30 ಹಸು ಹಾಗೂ ಕರುಗಳಿವೆ. ಕೂಡಲೇ ಹಸುಗಳಿಗೆ ಚಿಕಿತ್ಸೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ | Election 2023 | ಕಾಂಗ್ರೆಸ್ ಟಿಕೆಟ್ ಅರ್ಜಿ ಪಡೆದ 1,000 ಮಂದಿ: ಕೋಲಾರಕ್ಕೆ ಸುದರ್ಶನ್, ಫ್ಯಾಮಿಲಿ ಲೆಕ್ಕದಲ್ಲಿ ಅನೇಕರ ಸ್ಪರ್ಧೆ