Site icon Vistara News

ಹೀಗೂ ಉಂಟೇ! ಹಾಸನ ಪೊಲೀಸರಿಂದ ಎರಡು ಹಸುಗಳ ಬಂಧನ

cows arrested in hassan new

ಹಾಸನ: ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು, ತಪ್ಪು ಮಾಡಿದವರನ್ನು, ಸಾರ್ವಜನಿಕರಿಗೆ ತೊಂದರೆ ಮಾಡುವವರನ್ನು ಪೊಲೀಸರು ಬಂಧಿಸುವುದನ್ನು ನೋಡಿದ್ದೇವೆ. ಆದರೆ ಹಾಸನದಲ್ಲಿ ನಡೆದಿರುವ ವಿಚಿತ್ರ ಘಟನೆ ಬಗ್ಗೆ ತಿಳಿದುಕೊಂಡ ಬಳಿಕ, ಅರೇ ಇದೇನಪ್ಪ, ಹೀಗೂ ಉಂಟೇ ಎಂದು ಎಂಥವರಿಗಾದರೂ ಆಶ್ಚರ್ಯ ಆಗುತ್ತದೆ. ಹಾಸನ ಜಿಲ್ಲೆ ಬೇಲೂರು ಪೊಲೀಸ್ ಠಾಣೆ ಅಧಿಕಾರಿಗಳು, ಠಾಣೆ ಆವರಣದಲ್ಲಿ ನೆಟ್ಟಿದ್ದ ಗಿಡ ತಿಂದಿದ್ದಕ್ಕೆ ಹಸುಗಳನ್ನು ಬಂಧಿಸಿ ವಿಚಿತ್ರ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ | ಹಾಸನದಲ್ಲಿ ದೇವರ ವಿಗ್ರಹಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳು, ಎಫ್‌ಐಆರ್‌ ದಾಖಲು

ಹಸುಗಳ ಮಾಲೀಕರು

ನೆಟ್ಟಿದ್ದ ಗಿಡ ತಿಂದ ಪರಿಣಾಮ ಇದೀಗ ಠಾಣೆ ಕಾಂಪೌಂಡ್ ಒಳಗೆ ಹಸುಗಳನ್ನ ಕಟ್ಟಿಹಾಕಿದ್ದಾರೆ. ಸಿಪಿಐ ಯೋಗೀಶ್ ಅವರ ಆದೇಶದಂತೆ ಈ ಹಗಳನ್ನು ಕಟ್ಟಿ ಹಾಕಲಾಗಿದೆ. ಬಂಧಿಸಲ್ಪಟ್ಟಿರುವ ಜೆರ್ಸಿ ತಳಿಯ ಹಸುಗಳು ಅಲ್ಲಿನ ವೃದ್ಧೆಯರಿಬ್ಬರಿಗೆ ಸೇರಿದವು. ಜೀವನಕ್ಕೆ ಆಧಾರವಾಗಿರುವ ಹಸುಗಳನ್ನ ಬಿಡಿಸಿಕೊಡಿ ಎಂದು ಕಣ್ಣೀರು ಹಾಕಿ ಮನವಿ ಮಾಡಿದ್ದಾರೆ.

ಒಂದು ಹೊತ್ತಿಗೆ ಹತ್ತು ಲೀಟರ್ ಹಾಲು ಕೊಡುವ ಈ ಹಸುಗಳನ್ನೇ ನಂಬಿ ನಾವು ಜೀವನ ಮಾಡುತ್ತಿದ್ದೇವೆ. ನಮ್ಮ ಕಣ್ತಪ್ಪಿ ಹಸುಗಳು ಗಿಡ ತಿಂದಿರಬಹುದು. ಬೇಕೆಂದೇ ಈ ರೀತಿ ಮಾಡಿಲ್ಲ‌, ಮುಂದೆ ಈ ರೀತಿ ಮಾಡುವುದಿಲ್ಲ. ಹಾಲು ಕರೆಯದಿದ್ದರೆ ಕೆಚ್ಚಲು ಬಾವು ಬರುತ್ತದೆ. ಹೀಗಾಗಿ  ದಯವಿಟ್ಟು ನಮ್ಮ ಹಸುಗಳನ್ನ ಬಿಡಿ ಎಂದು ಅಂಗಲಾಚುತ್ತಿದ್ದಾರೆ. ಸದ್ಯ ಹಸುಗಳು ಬಂಧನದಲ್ಲೇ ಇದ್ದು, ವೃದ್ಧೆಯರ ಈ ಮನವಿಗೆ ಪೊಲೀಸರ ಮುಂದಿನ ನಡೆ ಏನೆಂಬುದು ಕಾದುನೋಡಬೇಕಿದೆ.

ಇದನ್ನೂ ಓದಿ | ಲಾಡ್ಜ್‌ನಲ್ಲಿ ಪಾರ್ಟಿ ಮಾಡ್ತಾ ಪ್ರಶಾಂತ್‌ ಹತ್ಯೆಗೆ ಸ್ಕೆಚ್‌! ಪೊಲೀಸರು ಲಾಡ್ಜ್‌ ಪರಿಶೀಲಿಸಿದಾಗ ಗೊತ್ತಾಗಿದ್ದೇನು?

Exit mobile version