Site icon Vistara News

Crematorium Problem : ಬೆಳಗಾವಿಯಲ್ಲಿ ಮಹಿಳೆಯರಿಂದಲೇ ನಡೀತು ಅಂತ್ಯ ಸಂಸ್ಕಾರ!

Women perform last rites in Belagavi

ಬೆಳಗಾವಿ: ಯಾರಾದರೂ ಸತ್ತರೆ ಆ ಗ್ರಾಮದಲ್ಲಿ ಉಳಲು ಭೂಮಿಯೂ ಇರಲಿಲ್ಲ, ಶವ ಸುಡಲು ಜಾಗವು ಇರಲಿಲ್ಲ. ಹೀಗಾಗಿ ಊರಾಚೆಗಿದ್ದ ಅದೊಂದು ಜಾಗದಲ್ಲಿ ಅಂತ್ಯಸಂಸ್ಕಾರವನ್ನು (Crematorium Problem) ನೆರವೇರಿಸುತ್ತಿದ್ದರು. ಹೀಗಿದ್ದಾಗ ನಿನ್ನೆ ಅನಾರೋಗ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಗ್ರಾಮಸ್ಥರು ಎಂದಿನಂತೆ ಆ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆಂದು ಸಿದ್ಧತೆಯನ್ನು ನಡೆಸುತ್ತಿದ್ದರು. ಆದರೆ ಸಿದ್ಧತೆ ನಡೆಯುವಾಗಲೇ ಅಲ್ಲಿಗೆ ಬಂದ ಭೂ ಮಾಲೀಕ ಶವಸಂಸ್ಕಾರ ಇಲ್ಲಿ ಮಾಡ್ಬೇಡಿ ಎಂದು ಆಕ್ಷೇಪವನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲ ಕೋರ್ಟ್‌ನಿಂದ ತಡಯಾಜ್ಞೆಯನ್ನು ತಂದ ಘಟನೆ ಬೆಳಗಾವಿ ಜಿಲ್ಲೆಯ ಕವಳೇವಾಡಿ ಗ್ರಾಮದಲ್ಲಿ ನಡೆದಿದೆ.

ಕವಳೇವಾಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಅನಾರೋಗ್ಯದಿಂದ ತುಕಾರಾಮ್ ಮೋರೆ ಎಂಬುವವರು ಮೃತಪಟ್ಟಿದ್ದರು. ಸ್ಮಶಾನ ಭೂಮಿ ಇಲ್ಲದ ಕಾರಣಕ್ಕೆ ಗ್ರಾಮಸ್ಥರು, ಓಮನಿ ಗಾವಡೆ ಎಂಬುವವರ ಜಾಗದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲು ಮುಂದಾಗಿದ್ದರು. ಆದರೆ ಇದಕ್ಕೆ ಓಮನಿ ಗಾವಡೆ ಅವರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಕಿಡಿಕಾರಿದ ಗ್ರಾಮಸ್ಥರು ಅಲ್ಲೇ ಶವವಿಟ್ಟು ಪ್ರತಿಭಟಿಸಿದರು.

ಇದನ್ನೂ ಓದಿ: Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಸ್ಮಶಾನದ ಭೂಮಿ ಇಲ್ಲದ ಕಾರಣಕ್ಕೆ ಈ ಮೊದಲು ಇದೆ ಜಾಗದಲ್ಲಿ ಗ್ರಾಮಸ್ಥರು ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಕೋರ್ಟ್ ಮೊರೆ ಹೋಗಿದ್ದ ಓಮನಿ ಗಾವಡೆ ಅವರ ಪರವಾಗಿ ಆದೇಶ ಬಂದಿತ್ತು. ಹೀಗಾಗಿ ನನ್ನ ಜಮೀನಿನಲ್ಲಿ ಅಂತ್ಯ ಸಂಸ್ಕಾರವನ್ನು ಮಾಡ್ಬೇಡಿ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

ವಿವಾದಿತ ಸ್ಥಳದಲ್ಲಿ ಮಹಿಳೆಯರಿಂದಲೇ ಅಂತ್ಯ ಸಂಸ್ಕಾರ

ವಿವಾದಿತ ಜಾಗದಲ್ಲಿ ಅಂತ್ಯಕ್ರಿಯೆಗೆ ಗ್ರಾಮಸ್ಥರು ಪಟ್ಟು ಹಿಡಿದು, ಪ್ರತಿಭಟನೆ ನಡೆಸಿದರು. ಇದೇ ವೇಳೆ ಚಿತೆಯ ಮೇಲೆ ಶವವಿಟ್ಟು ಪೆಟ್ರೋಲ್ ಸುರಿದು ಮಹಿಳೆಯರೇ ಅಗ್ನಿಸ್ಪರ್ಶವನ್ನು ಮಾಡಿದರು. ಜಮೀನು ಮಾಲೀಕ ಓಮಿನಿ ಮೋರೆ ತಕರಾರಿನ ನಡುವೆಯೂ ಮಹಿಳೆಯರು ಶವದ ಬಳಿ ನಿಂತು ಅಂತಿಮ ವಿಧಿ ವಿಧಾನ ಪೂರೈಸಿದರು. ತಾವೇ ಮಂತ್ರಗಳನ್ನು ಹೇಳಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version