Site icon Vistara News

Crime news | ಇಬ್ಬರು ನಕಲಿ ಪೊಲೀಸರ ಬಂಧನ; 4 ತೊಲೆ ಬಂಗಾರ, ಎರಡು ಬೈಕ್ ವಶ

bellary crime news ನಕಲಿ ಪೊಲೀಸರು

ಬಳ್ಳಾರಿ: ಪೊಲೀಸರು ಎಂದು ಹೇಳಿಕೊಂಡು ಅಪರಾಧಿ ಕೃತ್ಯಗಳಲ್ಲಿ (Crime news) ತೊಡಗಿದ್ದ ಇಬ್ಬರು ನಕಲಿ ಪೊಲೀಸರನ್ನು ಬಂಧಿಸಿ, ಅವರಿಂದ 4 ತೊಲೆ ಬಂಗಾರ , ಒಂದು ಬೈಕ್ ಮತ್ತು ಒಂದು ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್‌ಪಿ ನೇತೃತ್ವದ ಬಳ್ಳಾರಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಗದಗ ಜಿಲ್ಲೆಯ ಸಂಜಯ್ ಬಸಪ್ಪ ಮತ್ತು ಬಳ್ಳಾರಿಯ ನಂದೀಶ್ ಬಂಧಿತ ಆರೋಪಿಗಳಾಗಿದ್ದಾರೆ.

ರಘು ಎನ್ನುವವರು ಶಿವ ದೇವಾಲಯಕ್ಕೆ ಹೋಗಿ ರಸ್ತೆಯಲ್ಲಿ ಬರುತ್ತಿರುವಾಗ ಇಬ್ಬರು ವ್ಯಕ್ತಿಗಳು ತಾವು ಪೊಲೀಸರೆಂದು ಹೇಳಿಕೊಂಡು 15 ಸಾವಿರ ರೂ.ನಗದು, 60 ಸಾವಿರ ರೂ. ಮೌಲ್ಯದ ಬಂಗಾರ ಸರವನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಅವರು ದೂರು ದಾಖಲು ಮಾಡಿದ್ದರು.

ದೂರು ಕುರಿತು ತನಿಖೆ ಮಾಡುತ್ತಾ ಬಳ್ಳಾರಿ ಗ್ರಾಮೀಣ ಪೊಲೀಸರು ಬೆಂಗಳೂರು ರಸ್ತೆಯಲ್ಲಿ ಗಸ್ತು‌ ತಿರುಗುತ್ತಿದ್ದರು. ಈ ವೇಳೆ ಪೊಲೀಸರನ್ನು ನೋಡಿ, ಅನುಮಾನಾಸ್ಪದವಾಗಿ ಹೋಗುತ್ತಿರುವಾಗ ಇಬ್ಬರನ್ನೂ ‌ಪೊಲೀಸರು ವಶಕ್ಕೆ ಪಡೆದು‌ ವಿಚಾರಿಸಿದರು. ಈ ಸಂದರ್ಭದಲ್ಲಿ ನಕಲಿ‌ ಪೊಲೀಸರೆಂದು ಹೇಳಿಕೊಂಡು ಹಣ ದೋಚಿರುವುದು ಸೇರಿದಂತೆ ಇನ್ನಿತರ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳನ್ನು ಬಂಧಿಸಿ, ಅವರಿಂದ ಬೈಕ್ ಮತ್ತು ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ‌. ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿರುವ ಡಿವೈಎಸ್ಪಿ‌ ಸತ್ಯನಾರಾಯಣ ರಾವ್, ಸಿಪಿಐ ನಿರಂಜನ್, ಪಿಎಸ್‌ಐ ತಿಮ್ಮಣ್ಣ, ಶಾರದಾ ಸೇರಿದಂತೆ ಇತರ ಸಿಬ್ಬಂದಿ ಕಾರ್ಯದ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Border Dispute | ಮಹಾರಾಷ್ಟ್ರದ ಜತ್‌ನಲ್ಲಿ ಹಾರಿತು ಕನ್ನಡ ಧ್ವಜ; ಕರ್ನಾಟಕ, ಸಿಎಂ ಬೊಮ್ಮಾಯಿ ಪರ ಘೋಷಣೆ

Exit mobile version