ವಿಜಯಪುರ: ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆಯೊಂದು ಪತ್ತೆ (Crocodile Found) ಆಗಿದೆ. ಕೊಲ್ಹಾರ ಪಟ್ಟಣದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ ಸೇತುವೆ ಬಳಿ ಮೊಸಳೆ ಕಾಣಿಸಿಕೊಂಡಿದ್ದು, ಜನರು ಭೀತಿಗೊಂಡಿದ್ದಾರೆ.
ಜನವಸತಿಗೆ ನುಗ್ಗಿದಾಗ ಹಗ್ಗ ಕಟ್ಟಿ ಹಿಡಿಯುವ ವೇಳೆ ತಪ್ಪಿಸಿಕೊಂಡು ನದಿಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಬಾಯಿಗೆ ಹಗ್ಗ ಕಟ್ಟಿರುವ ಕಾರಣ ಆಹಾರ ಸೇವಿಸಲು ಆಗದೇ ನದಿಯಾಚೆ ಹೊರ ಬಂದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಸದ್ಯ ಎನ್ಎಚ್ 218ರ ಮೇಲೆ ಮೊಸಳೆ ಬೀಡು ಬಿಟ್ಟಿದ್ದು, ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: Umesh Pal murder : ಉಮೇಶ್ ಪಾಲ್ ಹತ್ಯೆ ವೇಳೆ ಗಾಯಗೊಂಡಿದ್ದ ಪೊಲೀಸ್ ಪೇದೆ ಚಿಕಿತ್ಸೆ ಫಲಿಸದೆ ಸಾವು
ಸ್ಥಳಕ್ಕೆ ಕೊಲ್ಹಾರ ಪೊಲೀಸರು ಆಗಮಿಸಿದ್ದು, ಮೊಸಳೆ ಬಾಯಿಗೆ ಕಟ್ಟಿದ್ದ ಹಗ್ಗ ಬಿಡಿಸಿ ನದಿಗೆ ಬಿಟ್ಟಿದ್ದಾರೆ. ಇನ್ನು ಮೊಸಳೆ ಸುದ್ದಿ ತಿಳಿಯುತ್ತಿದ್ದಂತೆ ಎನ್‌ಎಚ್ 128ರ ಮಾರ್ಗದಲ್ಲಿ ಸಂಚಾರಿಸುತ್ತಿದ್ದ ವಾಹನ ಸವಾರರು ಎಲ್ಲರೂ ಮೊಬೈಲ್ ಹಿಡಿದು ಫೋಟೊ ಕ್ಲಿಕಿಸುತ್ತಿದ್ದ ಚಿತ್ರಣ ಕಂಡು ಬಂತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ