ಬೆಂಗಳೂರು: 2021ರ ಮುಂಗಾರು ಹಂಗಾಮಿನಲ್ಲಿ ಜಿಲ್ಲಾವಾರು ಬೆಳೆ ಪರಿಹಾರವನ್ನು ವಿಮಾ ಸಂಸ್ಥೆಗಳಿಂದ 5,90,925 ಫಲಾನುಭವಿಗಳ 749.17 ಕೋಟಿ ರೂಪಾಯಿ ಬೆಳೆ ಪರಿಹಾರ ಮೊತ್ತವನ್ನು ಲೆಕ್ಕ ಹಾಕಿದ್ದು, ಈ ಪೈಕಿ ಒಟ್ಟು 3,86,266 ಫಲಾನುಭವಿಗಳ 609.59 ಕೋಟಿ ರೂಪಾಯಿ ಮೊತ್ತವನ್ನು ಇತ್ಯರ್ಥಪಡಿಸಲಾಗಿದೆ. ಉಳಿದಿರುವ 1,91,417 ಫಲಾನುಭವಿಗಳ 139.57 ಕೋಟಿ ರೂಪಾಯಿ ಪರಿಹಾರವನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ 5688 ರೈತರ 16.12 ಕೋಟಿ ರೂ., ಬಳ್ಳಾರಿ ಜಿಲ್ಲೆಯ 8334 ರೈತರಿಗೆ 8.43 ಕೋಟಿ ರೂ., ಬೆಳಗಾವಿ ಜಿಲ್ಲೆಯ 4771 ರೈತರ 5.44 ಕೋಟಿ ರೂ., ಚಿಕ್ಕಬಳ್ಳಾಪುರ ಜಿಲ್ಲೆಯ 7545 ರೈತರ 5.67 ಕೋಟಿ ರೂ., ಚಿತ್ರದುರ್ಗ ಜಿಲ್ಲೆಯ 35428 ರೈತರ 65.43 ಕೋಟಿ ರೂ. ಸೇರಿ ಒಟ್ಟು 30 ಜಿಲ್ಲೆಗಳ 3,86,266 ಫಲಾನುಭವಿಗಳ 60,959.50 ಲಕ್ಷ ರೂಪಾಯಿ ಮೊತ್ತವನ್ನು ಇತ್ಯರ್ಥಪಡಿಸಲಾಗಿರುತ್ತದೆ.
ಇದನ್ನೂ ಓದಿ | ರಸಗೊಬ್ಬರ, ಬಿತ್ತನೆ ಬೀಜ ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ ಎಂದ ಬಿ.ಸಿ.ಪಾಟೀಲ್