ಕೋಲಾರ: ಮಾಂಡೌಸ್ ಚಂಡಮಾರುತದ (Cyclone Mandous) ಪ್ರಭಾವದಿಂದ ಕೆರೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಶ್ರೀನಿವಾಸಪುರ, ರಾಯಲ್ಪಾಡು, ಮುಳಬಾಗಿಲು ಗಡಿ ಗ್ರಾಮಗಳ ಕೆರೆಗಳು ತುಂಬಿ ಹರಿಯುತ್ತಿದೆ.
ಕೆರೆಗಳು ತುಂಬಿ ಹರಿಯುತ್ತಿರುವ ಪರಿಣಾಮ ಆಂಧ್ರಪ್ರದೇಶದ ಪುಂಗನೂರು ಮಂಡಲದ ಲಕ್ಷ್ಮೀಪುರಂ ಕಾಲೋನಿ ಜಲಾವೃತಗೊಂಡಿದೆ. ಕಾಲೋನಿಯಲ್ಲಿ ನಿವಾಸಿಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಚಂಡಮಾರುತದ ಪ್ರಭಾವದಿಂದ ಸುತ್ತಮುತ್ತಲಿನ ಎಲ್ಲ ಕೆರೆಗಳು ತುಂಬಿ ಒಡೆದಿರುವುದರಿಂದ ಲಕ್ಷ್ಮೀಪುರಂನಲ್ಲಿ ಪ್ರವಾಹದ ನೀರು ಬಂದಿದೆ.
ಜಲಾವೃತಗೊಂಡ ಪ್ರದೇಶಗಳಿಂದ ಸುರಕ್ಷಿತವಾಗಿ ಜನರನ್ನು ಸ್ಥಳಾಂತರಿಸಲಾಗಿದೆ. ಜತೆಗೆ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಜಾನುವಾರು ಸಮೇತ ಗ್ರಾಮಸ್ಥರು ಸ್ಥಳಾಂತರ ಮಾಡಲಾಗುತ್ತಿದೆ.
ಇದನ್ನೂ ಓದಿ | Cyclone Mandous | ಮಾಂಡೌಸ್ ಎಫೆಕ್ಟ್; 5 ದಿನ ಭತ್ತ ಕಟಾವು ಮಾಡ್ಬೇಡಿ ಎಂದ ಕೃಷಿ ಇಲಾಖೆ