Site icon Vistara News

ಕ್ರೈಸ್ತ ಶಿಕ್ಷಕಿಯಿಂದ ರಾಮನ ಅವಹೇಳನ ಕೇಸ್‌; ವಿವಾದ ನಿರ್ವಹಣೆಯಲ್ಲಿ ವಿಫಲವಾದ ಡಿಡಿಪಿಐ ವರ್ಗಾವಣೆ

Dakshina Kannada DDPI transfer fails to manage dispute

ಮಂಗಳೂರು: ಹಿಂದು ಧರ್ಮ ಹಾಗೂ ರಾಮನ ಅವಹೇಳನ ಮಾಡಿದ ಸಂತ ಜೆರೊಸಾ ಶಾಲೆಯ ಶಿಕ್ಷಕಿ ಅಮಾನತು ಬೆನ್ನಲ್ಲೇ ಡಿಡಿಪಿಐ ತಲೆದಂಡವಾಗಿದೆ. ವಿವಾದವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಡಿಡಿಪಿಐ ಅವರ ದಿಢೀರ್ ವರ್ಗಾವಣೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಡಿಡಿಪಿಐ ದಯಾನಂದ ನಾಯ್ಕ ದಿಢೀರ್ ವರ್ಗಾವಣೆಯಾಗಿದ್ದಾರೆ. ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರನ್ನಾಗಿ ನೇಮಸಿ ವರ್ಗಾವಣೆ ಮಾಡಲಾಗಿದೆ. ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಡಿಡಿಪಿಐ ಆಗಿ ನೇಮಕ ಮಾಡಲಾಗಿದೆ. ಇವರು ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಉಪನಿರ್ದೇಶಕ (ಯೋಜನೆ)ರಾಗಿದ್ದರು.

ವಿವಾದವನ್ನು ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ ದಯಾನಂದ ನಾಯ್ಕ ಅವರ ವಿರುದ್ಧ ದ.ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಡಿಡಿಪಿಐ ವಿರುದ್ಧ ವರ್ಗಾವಣೆಯ ಅಸ್ತ್ರ ಪ್ರಯೋಗವಾಗಿದೆ.

ಶಾಲೆಯ ಮುಂದೆ ಪ್ರತಿಭಟನೆ; ಶಾಸಕ ವೇದವ್ಯಾಸ ಕಾಮತ್ ಸೇರಿ ಐವರ ವಿರುದ್ಧ ದೂರು

ಜೆರೊಸಾ ಶಾಲೆ ಶಿಕ್ಷಕಿಯಿಂದ ಹಿಂದು ಧರ್ಮ ಅವಹೇಳನ ಖಂಡಿಸಿ ಪ್ರತಿಭಟನೆ ನಡೆಸಿದ ವೇಳೆ ಜೈ ಶ್ರೀರಾಮ್‌ ಘೋಷಣೆಗಳನ್ನು ಕೂಗಿರುವುದಕ್ಕೆ ಶಾಸಕ ವೇದವ್ಯಾಸ ಕಾಮತ್ ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ.

ಅನಿಲ್ ಜೆರೆಲ್ಡ್ ಲೋಬೋ ಎಂಬುವರರು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಲೆಯ ಶಿಕ್ಷಕಿ ಯಾವುದೇ ತಪ್ಪು ಮಾಡಿಲ್ಲ. ಆದರೂ ಶಾಲೆಯ ಎದುರುಗಡೆ ಜೈ ಶ್ರೀರಾಮ್ ಘೋಷಣೆ ಕೂಗಿ, ಹಿಂದು -ಕ್ರೈಸ್ತರ ಗಲಭೆಯಾಗುವಂತೆ ಪ್ರಚೋದನೆ ನೀಡಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಮನವಿ ಮಾಡಿದ್ದರು.

ಇದನ್ನೂ ಓದಿ | Idli guru Case: ಫ್ರಾಂಚೈಸಿ ಹೆಸರಲ್ಲಿ ಮೋಸ; ಇಡ್ಲಿಗುರು ಹೋಟೆಲ್‌ ಮಾಲೀಕ ಅರೆಸ್ಟ್‌

ಹೀಗಾಗಿ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಶರಣ್ ಪಂಪ್ವೆಲ್ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ. ಮಾಜಿ ಶಾಸಕ ಐವಾನ್ ಡಿಸೋಜಾ ನೇತೃತ್ವದ ಕಾಂಗ್ರೆಸ್ ನಿಯೋಗದೊಂದಿಗೆ ದೂರುದಾರ ಬಂದು ಠಾಣೆಗೆ ದೂರು ನೀಡಿದ್ದಾರೆ.

Exit mobile version