Site icon Vistara News

ಕಟ್ಟಡ ಕಾಮಗಾರಿ ವೇಳೆ ಸಿಕ್ಕಿದ ಹೆಬ್ಬಾವಿನ ಮೊಟ್ಟೆಗಳಿಂದ ಹೊರಬಂದವು 8 ಮರಿಗಳು

ಹೆಬ್ಬಾವು ಮರಿ

ಮಂಗಳೂರು: ಕಟ್ಟಡ ಕಾಮಗಾರಿ ವೇಳೆ ಸಿಕ್ಕಿದ್ದ ಹೆಬ್ಬಾವಿನ ಮೊಟ್ಟೆಗೆ ಕೃತಕ ಕಾವು ನೀಡಿದ ನಂತರ ಎಂದು ಮರಿಗಳು ಜನಿಸಿವೆ. ನಗರದ ಡೊಂಗರಕೇರಿಯ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಶಮಿತ್ ಸುವರ್ಣ ಎಂಬವರಿಗೆ ಸೇರಿದ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ಮೊಟ್ಟೆಗಳು ಪತ್ತೆಯಾಗಿದ್ದವು.

ಹೆಬ್ಬಾವಿನ ಮೊಟ್ಟೆಗಳು

ಈ ಮೊಟ್ಟೆಗಳನ್ನು ಉರಗ ತಜ್ಞ ಸ್ನೇಕ್ ಕಿರಣ್ ಎಂಬವರಿಗೆ ಕೊಟ್ಟಿದ್ದರು. ಕಿರಣ್ ಈ ಮೊಟ್ಟೆಗಳಿಗೆ ಕೃತಕ ಕಾವು ನೀಡಿದ ಕಾರಣ ಎಂಟು ಹೆಬ್ಬಾವಿನ ಮರಿಗಳು ಮೊಟ್ಟೆಯಿಂದ ಹೊರಬಂದಿವೆ. ಈಗ ಹೆಬ್ಬಾವಿನ ಮರಿಗಳನ್ನು ಅರಣ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಡಿಗೆ ಬಿಡಲಾಗಿದೆ.

ಇದನ್ನೂ ಓದಿ| ಮನೆಯ ಗೇಟಿನ ಪೋಸ್ಟ್ ಬಾಕ್ಸ್ ಒಳಗೆ ಬೆಚ್ಚಗೆ ಮಲಗಿತ್ತು ತೋಳದ ಹಾವು!

Exit mobile version