Site icon Vistara News

Dakshina Kannada News: ಕುಕ್ಕೆ ಸುಬ್ರಹ್ಮಣ್ಯದ ದರ್ಪಣತೀರ್ಥ ನದಿ ಸತ್ತ ತೇಲುತ್ತಿರುವ ಜಲಚರಗಳು

#image_title

ಸುಬ್ರಹ್ಮಣ್ಯ: ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಬಳಿಯಿರುವ ವಾಲಗದಕೇರಿಯ ದರ್ಪಣ ತೀರ್ಥ ನದಿಯಲ್ಲಿ ಸಾವಿರಾರು ಮೀನುಗಳ ಸಹಿತ ಜಲಚರಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಪರಿಸರದ ಕಲುಷಿತ ನೀರು ನದಿಗೆ ಸೇರಿರುವುದೇ ಘಟನೆಗೆ ಕಾರಣ ಎಂಬ ಶಂಕೆ (Dakshina Kannada News) ವ್ಯಕ್ತವಾಗಿದೆ.

ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಹರಿಯುವ ದರ್ಪಣ ತೀರ್ಥ ನದಿಯು ಕುಮಾರಧಾರಾ ನದಿಗೆ ಸೇರುವ ಮಧ್ಯ ಭಾಗದಲ್ಲಿರುವ ವಾಲಗದಕೇರಿ ಪ್ರದೇಶದಲ್ಲಿ ದೇವರ ಮೀನುಗಳ ಸಹಿತ ಹಲವಾರು ಜಾತಿಯ ಮೀನುಗಳು ಹಾಗೂ ಜಲಚರಗಳು ಮೃತಪಟ್ಟು ನೀರಿನಲ್ಲಿ ತೇಲುತ್ತಿವೆ. ಹಲವಾರು ಮೀನುಗಳು ದಡಕ್ಕೆ ಬಂದು ಬಿದ್ದಿವೆ. ಭಾರಿ ಪ್ರಮಾಣದಲ್ಲಿ ಮೀನುಗಳ ಮಾರಣಹೋಮವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: Indian Cultural Centre: ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆ

ಕುಕ್ಕೆ ಸುಬ್ರಹ್ಮಣ್ಯ ಪ್ರದೇಶದ ವಸತಿಗಳ ಹಾಗೂ ಒಳಚರಂಡಿಯ ಕಲುಷಿತ ನೀರು ಶುದ್ಧೀಕರಣ ಮಾಡದೇ ನದಿಗೆ ಸೇರ್ಪಡೆಗೊಂಡಿರುವುದರಿಂದ ದರ್ಪಣ ತೀರ್ಥ ನದಿ ಸಂಪೂರ್ಣವಾಗಿ ಮಲಿನಗೊಂಡಿದೆ. ನೀರಿನ ಬಣ್ಣವೂ ಕೊಳಚೆ ನೀರಿನ ರೀತಿಯಲ್ಲಿ ಕಾಣುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಮೀನುಗಳ ಸಾವಿನಿಂದಾಗಿ ಈ ಪರಿಸರದಲ್ಲಿ ದುರ್ವಾಸನೆ ಹಬ್ಬಿದ್ದು ಅಕ್ಕಪಕ್ಕದವರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ. ಮಾತ್ರವಲ್ಲದೆ ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ. ಈವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Exit mobile version