Site icon Vistara News

ಅತಿಭೋಗ ಮನಸ್ಥಿತಿಯಿಂದ ಪರಿಸರಕ್ಕೆ ಹಾನಿ: ಡಾ. ಪ್ರಭಾಕರ ಭಟ್ ಕಲ್ಲಡ್ಕ

ಡಾ. ಪ್ರಭಾಕರ ಭಟ್

ಮಂಗಳೂರು: ಮನುಷ್ಯನ ಅತಿಭೋಗ ಮನಸ್ಥಿತಿಯಿಂದಾಗಿ ಪರಿಸರದ ಮೇಲೆ ತೀವ್ರವಾದ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿವೆ. ಪರಿಸರಕ್ಕೆ ಹಾನಿಯಾಗದಂತೆ ಬದುಕುವ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಪುತ್ತೂರು ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಆಶ್ರಯದಲ್ಲಿ ಪರ್ಯಾವರಣ ಸಂರಕ್ಷಣಾ ಗತಿವಿಧಿಯಿಂದ ಆಯೋಜಿಸಿದ್ದ “ಪರಿಸರ ಸ್ನೇಹಿ ವಿದ್ಯಾಲಯ” ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರ ಉದ್ಘಾಟಸಿ ಮಾತನಾಡಿದರು.

ಇದನ್ನೂ ಓದಿ | ಉಮೇಶ್‌ ಕತ್ತಿ ನಿಧನ ಹಿನ್ನೆಲೆ: ನಾಳೆ ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಸೆ.11ಕ್ಕೆ ಮುಂದೂಡಿಕೆ

ವಿದ್ಯಾ ಸಂಸ್ಥೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳು. ಸಮಾಜದಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಬೇಕಾದರೆ ಶಿಕ್ಷಕರ ಮತ್ತು ಶಿಕ್ಷಣದ ಪಾತ್ರ ಬಹಳ ಮಹತ್ವದ್ದು, ಅದು ಪರಿಸರ ಸಂರಕ್ಷಣೆ ವಿಷಯಕ್ಕೂ ಅನ್ವಯಿಸುತ್ತದೆ ಎಂದು ಹೇಳಿದರು. ಜಲವನ್ನು ತೀರ್ಥ ರೂಪದಲ್ಲಿ ಹಿತಮಿತವಾಗಿ ಬಳಸಬೇಕು, ಅಪವ್ಯಯ ಸಲ್ಲದು. ನಮಗೆ ಸರ್ವವನ್ನೂ ಕೊಟ್ಟಿರುವ ಭೂಮಿ, ಮಾತೃ ಭೂಮಿ ರಕ್ಷಣೆ ನಮ್ಮ ದ್ಯೆಯವಾಗಬೇಕು ಎಂದು ಹೇಳಿದರು.

ಶ್ರೀರಾಮ ವಿದ್ಯಾಕೇಂದ್ರದ ಪ್ರಾಂಶುಪಾಲ ಶ್ರೀ ಕೃಷ್ಣ ಪ್ರಸಾದ ತಮ್ಮ ವಿದ್ಯಾಸಂಸ್ಥೆಯಲ್ಲಿ ಅಳವಡಿಸಿಕೊಂಡಿರುವ ಪರಿಸರ ಸ್ನೇಹಿ ಅಂಶ ಮಳೆ ನೀರು ಸಂಗ್ರಹ, ಇಂಗುಗುಂಡಿ ವ್ಯವಸ್ಥೆ, ಸೋಲಾರ ಅಳವಡಿಕೆ, ಕದಂಬವನಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯದ ವಿವಿಧ ಭಾಗಗಳಿಂದ 120ಕ್ಕೂ ಅಧಿಕ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತಮ್ಮ ಶಾಲೆಗಳಲ್ಲಿ ಪರಿಸರ ಸ್ನೇಹಿ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಮತಿಸಿದರು. ಅರುಣ ಕುಮಾರ ಸ್ವಾಗತಿಸಿದರು. ಕುಮಾರಿ ಗಾಯತ್ರಿ ಪ್ರಾರ್ಥಿಸಿದರು. ಚಂದ್ರಹಾಸ ಪಿ. ಕಾರ್ಯಕ್ರಮ ನಿರ್ವಹಿಸಿದರು.

ಪರ್ಯಾವರಣ ಸಂರಕ್ಷಣಾ ಗತಿವಿಧಿಯ ಸಂಯೋಜಕರಾದ ಶ್ರೀ ವೆಂಕಟೇಶ ಸಂಗನಾಳ ಮತ್ತು ಶ್ರೀ ನರಸಿಂಹ ಪ್ರಸಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ | Bharat Jodo Yatra | ಪೋಸ್ಟರ್​​ನಲ್ಲಿ ಕಂಡುಬಂತು ರಾಬರ್ಟ್​ ವಾದ್ರಾ ಫೋಟೋ; ಬಿಜೆಪಿಯಿಂದ ಟೀಕೆ

Exit mobile version