ಬೆಂಗಳೂರು: ಬೆಂಗಳೂರಿನ ಸರಕಾರಿ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಅಮೃತಾ ಎಸ್.ಬೆಳಗಜೆ ಅವರಿಗೆ ಬಿ.ಎಚ್.ಎಂ.ಎಸ್ ಕೋರ್ಸಿನಲ್ಲಿ ನಾಲ್ಕು ಬಹುಮಾನಗಳು ಲಭಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಮೂಲದವರಾಗಿರುವ ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ- ಉಷಾ ಬೆಳಗಜೆ ಅವರ ಪುತ್ರಿಯಾದ ಅವರು, ಪ್ರಥಮ ವರ್ಷದಲ್ಲಿ ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿಯಲ್ಲಿ ಪ್ರಥಮ ರ್ಯಾಂಕ್, ಓವರ್ ಆಲ್ ಟಾಪರ್ 3ನೇ ರ್ಯಾಂಕ್, ಎರಡನೇ ವರ್ಷದಲ್ಲಿ ಫೊರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ 2ನೇ ರ್ಯಾಂಕ್ ಮತ್ತು ನಾಲ್ಕನೇ ವರ್ಷದಲ್ಲಿ ಮೆಟೀರಿಯಾ ಮೆಡಿಕಾದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ. ಈ ಬಹುಮಾನಗಳನ್ನು ಜನವರಿ 18ರಂದು ಬೆಂಗಳೂರಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ವಿತರಿಸಲಾಯಿತು.
ಕಿರಿಯ ತರಗತಿಗಳಿಂದಲೇ ಉತ್ತಮ ಶೈಕ್ಷಣಿಕ ಸಾಧನೆ ಮಾಡುತ್ತಿರುವ ಅಮೃತಾ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಟೈಮ್ಸ್ ಕಿಡ್ ಆಫ್ ದಿ ಇಯರ್ ಗೀತಾಂಜಲಿ ರಾವ್: 17ನೇ ವಯಸ್ಸಿಗೆ ವಿಶ್ವ ವಿಖ್ಯಾತಿ!