ಮಂಗಳೂರು: ಈಗಾಗಲೆ ಇಸ್ಲಾಂ ಹಾಗೂ ಪ್ರವಾದಿ ಮಹಮ್ಮದರ ವಿರುದ್ಧ ಮಾತನಾಡಿದ್ದಕ್ಕೆ ಬಿಜೆಪಿಯಿಂದ ನೂಪುರ್ ಶರ್ಮಾ ಉಚ್ಛಾಟನೆ ಆಗಿರುವ ಘಟನೆ ಹಸಿರಾಗಿರುವಾಗಲೆ ಕರ್ನಾಟಕದಲ್ಲಿ ಹಿಂದು ಜಾಗರಣ ವೇದಿಕೆ ಮುಖಂಡರೊಬ್ಬರು ಅಂತಹದೇ ಮಾತನ್ನಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸೋಮವಾರ ನಡೆದ ಹಿಂದು ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಭಾಷಣ ಮಾಡಿದ್ದಾರೆ.
ಇದನ್ನೂ ಓದಿ | ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ವಕ್ತಾರೆ ನೂಪುರ್ ಶರ್ಮಾ ಬಿಜೆಪಿಯಿಂದ ಅಮಾನತು
ಅವರು ಮಾಡಿದ ಭಾಷಣದ ಯಥಾವತ್ ರೂಪ ಇಲ್ಲಿದೆ: “ಇಸ್ಲಾಂ ಎನ್ನುವುದು ಧರ್ಮ ಅಲ್ಲ. ಮತವಲ್ಲ. ಅದು ಸಂಸ್ಕೃತಿ ಅಲ್ಲ. ಅದು ಸಭ್ಯತೆ ಅಲ್ಲ. ಅದು ಸಂಸ್ಕಾರ ಅಲ್ಲ. ಅದು ಮಾನವೀಯತೆ ಅಲ್ಲ. ಅದು ಕ್ರೌರ್ಯ. ಅಮಾನುಷತೆ, ಅತ್ಯಾಚಾರ. ಲೂಟಿಕೋರರ ತಂಡ. ಅದೊಂದು ಕಾಮುಕರ ಗ್ಯಾಂಗ್. ಈ ರೀತಿಯಾಗಿ ಅರ್ಥ ಮಾಡಿಕೊಳ್ಳಬಹುದು. ಅವರೆಲ್ಲರ ಚಟುವಟಿಕೆಗಳು ಮುಂಚೂಣಿಗೆ ಬಂದಾಗ, ಗಮನಿಸಿದಾಗ ನಮಗೆ ಅರ್ಥವಾಗುತ್ತದೆ” ಎಂದು ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.
ಇದನ್ನೂ ಓದಿ | ನೂಪುರ್ ಶರ್ಮಾ ಅಮಾನತಿಗೆ ಬಿಜೆಪಿ ಬಳಸಿದ್ದು ನಿಯಮ 10 ಎ, ಹಾಗಿದ್ದರೆ ಏನಿದೆ ಅದರಲ್ಲಿ?