ಮಂಗಳೂರು: ಮಳಲಿ ಮಸೀದಿಯ ವಿವಾದವನ್ನು ಸೌಹಾರ್ದವಾಗಿ ಇತ್ಯರ್ಥಪಡಿಸಲು ಸ್ಥಳೀಯ ಹಿಂದು-ಮುಸ್ಲಿಂ ಮುಖಂಡರು ನಿರ್ಧರಿಸಿದ್ದಾರೆ. ವಿವಾದದ ಬಗ್ಗೆ ಉರಿದು ಬಿದ್ದಿದ್ದ ಎಸ್‌ಡಿಪಿಐಗೆ ಸೌಹಾರ್ದತೆಯ ಪಾಠವನ್ನು ಮಸೀದಿ ಆಡಳಿತ ಸಾರಿದೆ.
ಮಸೀದಿ ವಿವಾದ ಇತ್ಯರ್ಥ ಸಂಬಂಧ ಮಳಲಿ ಮಸೀದಿ ಆಡಳಿತ, ವಿಎಚ್‌ಪಿ ಮುಖಂಡರು ಹಾಗೂ ಮಳಲಿ ಗ್ರಾಮಸ್ಥರ ಸಭೆ ನಡೆದಿದೆ. ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಭಾಗವಹಿಸಿದ್ದಾರೆ. ಎರಡನೇ ಸುತ್ತಿನ ಸಭೆ ನಡೆಯಲಿದೆ.
ಮುಂದಿನ ವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಇದು ಗ್ರಾಮದ ಸಮಸ್ಯೆಯಾಗಿದ್ದು, ಹೊರಗಿನವರ ಮಧ್ಯಪ್ರವೇಶ ಅಗತ್ಯ ಇಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಇದನ್ನೂ ಓದಿ:ಮಳಲಿ ಮಸೀದಿಯ ಹಿಡಿ ಮಣ್ಣನ್ನೂ ಮುಟ್ಟಲು ಬಿಡುವುದಿಲ್ಲ: SDPI ಅಧ್ಯಕ್ಷ ಅಬ್ದುಲ್ ಮಜೀದ್