Site icon Vistara News

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Maravoor bridge in danger Vehicular traffic suspended

ಮಂಗಳೂರು: ಕಾಳಿ ನದಿ ಸೇತುವೆ ಮುರಿದ ಬಿದ್ದ ಬೆನ್ನಲ್ಲೇ ಮಂಗಳೂರಿನ ಮರವೂರು ಸೇತುವೆ (Maravoor Bridge) ಅಪಾಯದಲ್ಲಿದೆ. ಮರವೂರಿನ ಹಳೆ ಸೇತುವೆಯಲ್ಲಿ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ಸಂಚಾರ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನ ಹೊರವಲಯ ಮರವೂರಿನಲ್ಲಿ ಫಲ್ಗುಣಿ ನದಿ ಅಡ್ಡಲಾಗಿ ಇದ್ದ ಸೇತುವೆಯು ಮಂಗಳೂರು ನಗರದಿಂದ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸಲಿದೆ. 1969ರಲ್ಲಿ ನಿರ್ಮಾಣವಾಗಿದ್ದ ಹಳೆ ಸೇತುವೆಗೆ ಸದ್ಯ ಗೋಡೆ ನಿರ್ಮಿಸಿ ಸಂಪೂರ್ಣ ಸಂಚಾರ ನಿಷೇಸಲಾಗಿದೆ. ಹೊಸ ಸೇತುವೆಯಲ್ಲೇ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೋಟ್‌ ಮೂಲಕ ತೆರಳಿ ಸೇತುವೆ ಪರಿಶೀಲನೆ

ದೆಹಲಿ ತಜ್ಞರ ತಂಡವೊಂದು ಕಾರವಾರದ ಕಾಳಿ ನದಿ ಸೇತುವೆ ಪರಿಶೀಲಿಸಿದರು. ನದಿಯಲ್ಲಿ ಬೋಟ್‌ ಮೂಲಕ ತೆರಳಿ ಸೇತುವೆಯ ಕೆಳಭಾಗದಲ್ಲಿ ಪರಿಶೀಲನೆ ನಡೆಸಿದರು. ಎನ್‌ಎಚ್‌ಎಐ ತಂಡ ಹಳೆಯ ಸೇತುವೆ, ಹೊಸ ಸೇತುವೆ ಎರಡನ್ನೂ ಪರಿಶೀಲಿಸಿದ್ದಾರೆ. ತಜ್ಞರ ತಂಡ ಪರಿಶೀಲನೆ ಬಳಿಕ ಜಿಲ್ಲಾಡಳಿತಕ್ಕೆ ಲಿಖಿತವಾಗಿ ವರದಿ ನೀಡಲಿದ್ದಾರೆ.

ಇದನ್ನು ಓದಿ: Detective Agency: ಡಿಟೆಕ್ಟಿವ್‌ ಏಜೆನ್ಸಿಗಳಿಗೆ ಅನಧಿಕೃತವಾಗಿ ಸಿಡಿಆರ್‌ ನೀಡುತ್ತಿದ್ದ ಕಾನ್ಸ್‌ಟೇಬಲ್‌ ಅರೆಸ್ಟ್‌

ಕಾರವಾರದ ಹಳೆಯ ಕಾಳಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ ಮಾಹಿತಿ ನೀಡಿದ್ದಾರೆ. ಹೊಸ ಸೇತುವೆ ಮೇಲೆ ದ್ವಿಪಥ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೊಸ ಸೇತುವೆ ಧಾರಣ ಶಕ್ತಿ ಬಗ್ಗೆ ವರದಿ ಕೇಳಲಾಗಿದೆ. NHAI ಪರವಾಗಿ Assytem India Limited ನಿಂದ ಸೇತುವೆ ಪರಿಶೀಲನೆ ನಡೆದಿದೆ. ಹೊಸ ಸೇತುವೆಯ ಪರಿಶೀಲನೆ ಬಳಿಕ ಸಂಚಾರಕ್ಕೆ ಪ್ರಮಾಣಿಕರಿಸಿದೆ. ಎನ್‌ಎಚ್‌ಎಐ ಸೇತುವೆ ದೃಢತೆ ಬಗ್ಗೆ ಮೌಖಿಕವಾಗಿ ತಿಳಿಸಿದೆ. ಐಆರ್‌ಬಿ (IRB) ಯಿಂದ 2018ರಲ್ಲಿ ನಿರ್ಮಾಣವಾದ ಹೊಸ ಸೇತುವೆಯಲ್ಲಿ 2021ರಿಂದ ಏಕಮುಖ ಸಂಚಾರಕ್ಕೆ ಬಳಕೆಯಾಗುತ್ತಿತ್ತು. ಇದೀಗ ದ್ವಿಪಥ ಸಂಚಾರಕ್ಕೆ ಗ್ರೀನ್‌ಸಿಗ್ನಲ್ ನೀಡಿದೆ. ಸೇತುವೆಯ ಎರಡೂ ಬದಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಲಿಖಿತ ವರದಿ ಬಳಿಕ ಕೆಎಸ್ಆರ್‌ಟಿಸಿ ಬಸ್ ಸಂಚಾರಕ್ಕೂ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ‌ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version