ಸುಳ್ಯ: ತೋಟದ ಬದಿಯ ತೋಡಿನ ಕಟ್ಟೆ ಒಡೆದ ಪರಿಣಾಮ ತೋಡು ಹರಿದು ತೋಟಗಳು ಜಲಾವೃತವಾಗಿರುವ ಘಟನೆ ಕಂದಡ್ಕದಲ್ಲಿ ನಡೆದಿದೆ. ಬುಧವಾರ ಸಂಜೆ ಸುರಿದ ಭಾರಿ ಮಳೆಗೆ (Rain effect) ಕಂದಡ್ಕದಲ್ಲಿರುವ ತೋಟಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದೆ.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹಾಗೂ ಅವರ ಸಹೋದರ ಹೇಮಂತ್ ಕಂದಡ್ಕರ ಇಬ್ಬರ ತೋಟಕ್ಕೂ ನೀರು ನುಗ್ಗಿದೆ. ಆನಂದ ನಾಯಕ್ ಎಂಬುವವರ ತೋಟಕ್ಕೆ ನೀರು ನುಗ್ಗಿ ಜಲಾವೃತವಾಗಿದೆ. ತೋಡಿನ ಕಟ್ಟೆ ಒಡೆದು ನೀರು ಆನಂದ ನಾಯಕ್ ಅವರ ತೋಟದೊಳಗೆ ನುಗ್ಗಿದೆ.
ಇದೀಗ ತೋಡಿನ ನೀರು ತೋಟದಲ್ಲಿಯೇ ಹರಿಯುತ್ತಿದೆ. ಒಂದೂವರೆ ಗಂಟೆಗಳ ಕಾಲ ಸುರಿದ ಮಳೆಗೆ ಹಳ್ಳ ಕೊಳ್ಳ ತೋಡುಗಳು ತುಂಬಿ ಹರಿಯುತ್ತಿವೆ. ಕಂದಡ್ಕದಲ್ಲಿ ನೀರು ನಿಂತು ರಸ್ತೆ, ತೋಟಗಳಿಗೆ ನುಗ್ಗಿದೆ.
ಇದನ್ನೂ ಓದಿ | Rain News | ಮಳೆಯ ಅಬ್ಬರ, ಗುಡ್ಡ ಕುಸಿತ; ಗೋವಾ, ಕರ್ನಾಟಕ ಸಂಚಾರ ಸ್ಥಗಿತ