Site icon Vistara News

Shivaratri: ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ರಂಜಿಸಿದ ಕೋಡಂದೂರು ಅಮ್ಮ-ಮಗಳ ದ್ವಂದ್ವ ಗಾಯನ

puttur

puttur

ಪುತ್ತೂರು: ಹತ್ತೂರ ಭಕ್ತರಲ್ಲಿ ಮನೆ ಮಾಡಿದ ಪುತ್ತೂರು ಒಡೆಯ ಮಹಾಲಿಂಗೇಶ್ವರ (Puttur Mahalingeshwara Temple)ನ ಮಹಾಶಿವರಾತ್ರಿ (Shivaratri)ಯ ಸಂಭ್ರಮದಲ್ಲಿ ಸ್ವರ ಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರು ಮತ್ತು ಅವರ ಮಗಳು ಸಿಂಚನಾ ಲಕ್ಷ್ಮೀ ಕೋಡಂದೂರು ಅವರ ಅಮ್ಮ -ಮಗಳ ದ್ವಂದ್ವ ಗಾಯನ ನಟರಾಜ ವೇದಿಕೆಯಲ್ಲಿ ಭಕ್ತರ ಗಮನ ಸೆಳೆಯಿತು. ಮಹಾ ಮಹಿಮನ ಆರಾಧನೆಯಲ್ಲಿ ಮಗ್ನರಾದ ಶಿವಭಕ್ತ ವೃಂದಕ್ಕೆ ಸಂಗೀತ ಕಲಾ ಸೇವೆಯನ್ನು ನೀಡಿದರು.

ಜನಪ್ರಿಯ ಶಿವ ಗೀತೆಗಳು, ಸುಮಧುರ ಗೀತೆಗಳನ್ನು ಹಾಡಿ ಅಮ್ಮ-ಮಗಳ ಜೋಡಿ ಎಲ್ಲರ ಮೆಚ್ಚುಗೆ ಗಳಿಸಿತು. ʼಶಿವನೆಂದರೆ ದೈವಗಳಿಗೆ ಮಹಾದೇವʼ, ʼಸತ್ಯ ಸತ್ವಗಳ ಅನುಭವʼ ಇಂತಹ ಶಿವನ ಕುರಿತು ಹತ್ತಕ್ಕೂ ಹೆಚ್ಚು ಹಾಡುಗಳನ್ನು ಮಧುವಾಗಿ ಪ್ರಸ್ತುತಪಡಿಸಿದರು. ಸುಮಧುರ ಹಿನ್ನೆಲೆಗಳ ಪಕ್ಕ ವಾದ್ಯಗಳೊಂದಿಗೆ ಹೆಣೆದ ಸುಂದರ ಹಾಡುಗಳ ಗುಚ್ಚವಿದು. ವರ್ಣದ ರೇವತಿ ರಾಗದ ಆದಿತಾಳ ಡಾ. ನಾಗಮಣಿ ಶ್ರೀನಾಥ್ ರಚನೆಯ ಓಂ ಶಂಭೋ ಮಹಾದೇವ ಹಾಡನ್ನು ಹಾಡಿದರು. ಡಾ. ಬಾಲಮುರಳಿ ಕೃಷ್ಣ, ವೆಂಕಟ ಮತ್ತಿತರರ ರಚನೆಯ ಕಾವ್ಯವನ್ನೂ ಸವಿತಾ ಕೋಡಂದೂರು ಮತ್ತು ಸಿಂಚನಾ ಲಕ್ಷ್ಮೀ ಕೋಡಂದೂರು ನೆರೆದವರ ಮುಂದಿಟ್ಟರು.

ರಾಗ ರೇವಾಗುಪ್ತಿ ಮಿಶ್ರ ಚಾಪು ತಾಳದ ಸ್ವಾತಿ ತಿರುನಾಳ್ ರಚನೆಯ ಗೋಪಾಲಕ ಪಾಹಿಮಾನ್, ಶಿವರಂಜನ್ ಭಜನ್, ಶಿವಸ್ತುತಿ, ಶಿವಾಯ ಸಂಗೀತದ ನಾದ ಸುತ್ತಾಟ ರಾಗ ಚೌಳಿ ಆದಿತಾಳ ಅಣ್ಣಮಚಾರ್ಯ ರಚನೆಯ ಬ್ರಹ್ಮಮೋಕ್ಕಟೆ ಸರ್ವರನ್ನೂ ತನ್ನತ್ತ ಸೆಳೇದುಕೊಂಡಿತ್ತು. ರಾಗ ಬೃಂದಾವನ ರಾಗದ ತಿಲ್ಲಾನ ಹಾಡಿನೊಂದಿಗೆ ಸಮಾಪ್ತಿಯಾಯಿತು.

ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ ದ.ಕ., ಉಡುಪಿ ಇವರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಹಿಮ್ಮೇಳನದಲ್ಲಿ ಕೊಳಲು ವಾದಕರಾಗಿ ವಿದ್ವಾನ್ ಕೃಷ್ಣ ಗೋಪಾಲ್, ಮೃದಂಗ ವಾದಕರಾಗಿ ವಿದ್ವಾನ್ ಡಾ. ಶ್ರೀ ಪ್ರಕಾಶ್, ತಬಲ ವಾದಕರಾಗಿ ವಿದ್ವಾನ್ ಸಾಯಿ ನಾರಾಯಣ ಕಲ್ಮಡ್ಕ ಸಹಕರಿಸಿದರು. ಶ್ರೀ ರಕ್ಷಾ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ: Arun Kumar Puthila : ಮುನಿಸು ಮರೆತು ಬಿಜೆಪಿ ಜತೆ ಕೈ ಜೋಡಿಸಿದ ಪುತ್ತಿಲ, ಕ್ಯಾಪ್ಟನ್‌ ನಿರಾಳ

Exit mobile version