Site icon Vistara News

Success Mantra : ಸಾಧನೆಗೆ ಸಾಂಸಾರಿಕ ಜೀವನ, ವೈಕಲ್ಯ ಯಾವುದೂ ಅಡ್ಡಿಯಲ್ಲ ಎಂದ ಡಾ. ರೀತು ಆನಂದ್‌

Success Mantra Dr Reetu Anand

ಮಂಗಳೂರು: ಸಾಧನೆ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆ ಇರುವವರಿಗೆ ಯಾವ ಅಡ್ಡಿಯೂ ಇಲ್ಲ (No hurdle will Curtail Success). ಹೆಣ್ಮಕ್ಕಳಿಗೆ ಸಾಂಸಾರಿಕ ಜೀವನ ಸಾಧನೆಗೆ ಅಡ್ಡಿಯಾಗಬಾರದು ಎಂದು ಮುಂಬೈ ನಾಯಕತ್ವ ಮತ್ತು ವೈವಿಧ್ಯತೆ ಸಂಸ್ಥೆಯ ಅಧಿಕಾರಿ ಡಾ. ರೀತು ಆನಂದ್ (Dr Reetu Anand) ಹೇಳಿದರು.

ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ (Besant Women’s College) ರಾಷ್ಟ್ರೀಯ ಮಹಿಳಾ ದಿನಾಚರಣೆಯ (National Women’s day) ಅಂಗವಾಗಿ, ಕಾಲೇಜಿನ ವಿದ್ಯಾರ್ಥಿ ಸಂಘವು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ‘ಸ್ಫೂರ್ತಿ, ಹುಡುಕಾಟದ ಸೇರ್ಪಡೆ’ ಎಂಬ ವಿಚಾರದ ಬಗ್ಗೆ ಉಪನ್ಯಾಸ, ಹಾಗೂ ಚರ್ಚಾಕೂಟವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ. ರೀತು ಆನಂದ್‌ ಭಾಗವಹಿಸಿದ್ದರು.

ಡಾ. ರೀತು ಆನಂದ್‌ ಅವರು ತಮ್ಮ ಸಾಧನೆ ಹಾಗೂ ಕಾರ್ಪೋರೇಟರ್ ವಲಯದಲ್ಲಿ ತಾನು ಎದುರಿಸಿದ ಸವಾಲುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು (Success Mantra).

ಸಾಧನೆಗೆ ನಿರ್ಬಂಧಗಳು, ಸಾಂಸಾರಿಕ ಜೀವನ, ಲಿಂಗ ತಾರತಮ್ಯ, ವರ್ಣ-ವರ್ಗ, ವಿಕಲಾಂಧತೆಗಳು ಅಡ್ಡಿಯಾಗುವುದಿಲ್ಲ. ಯಶಸ್ವಿ ಪುಗಸಟ್ಟೆಯಾಗಿ ಪ್ರಾಪ್ತಿಯಾಗುವುದಿಲ್ಲ. ಅದರ ಹಿಂದೆ ಪ್ರಾಮಾಣಿಕ ಪ್ರಯತ್ನ, ಅಗಾಧ ಜ್ಞಾನ, ನಂಬಿಕೆ, ಸಾಧಿಸುವ ಛಲ ಅಗತ್ಯವಾಗಿ ಬೇಕು. ಈ ಎಲ್ಲಾ ಅರ್ಹತೆಗಳು ಸ್ತ್ರೀಯರಲ್ಲಿ ಅಪಾರವಾಗಿದ್ದು, ಜ್ವಲಂತ ಸನ್ನಿವೇಶಗಳು ಇದಕ್ಕೆ ಸಾಕ್ಷಿಯಾಗಿದೆ‛ ಎಂದು ಡಾ. ರೀತು ಹೇಳಿದರು.

ಡಾ. ರೀತು ಆನಂದ್ ವಿದ್ಯಾರ್ಥಿನಿಯರೊಂದಿಗೆ ಚರ್ಚಾ ಕೂಟದಲ್ಲಿ ಭಾಗಿಯಾಗಿ, ಅವರಲ್ಲಿ ಧನಾತ್ಮಕ ಚಿಂತನೆಯನ್ನು ಹುಟ್ಟು ಹಾಕಿದರು. ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕು. ಶ್ರೀಮತಿ, ನಿರೀಕ್ಷಾ, ಜಾಸ್ಮಿನ್, ಅಖಿಲಾ, ಹರ್ಷಿತಾ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ರುವಾರಿ ಆರ್.ಬಿ.ಐ.ಯ ಮಾಜಿ ಡೆಪ್ಯುಟಿ ಗವರ್ನರ್ ಮಿಥುನ್‌ದಾಸ್ ಲೀಲಾಧರ್, ಡಬ್ಲೂ.ಎನ್.ಇ.ಎಸ್.ನ ಅಧ್ಯಕ್ಷರಾದ ಮಣೇಲ್ ಅಣ್ಣಪ್ಪ ನಾಯಕ್, ಬಿ.ಡಬ್ಲ್ಯೂ.ಸಿ.ಯ ಸಂಚಾಲಕರು ಹಾಗೂ ಡಬ್ಲೂ.ಎನ್.ಇ.ಎಸ್.ನ ಉಪಾಧ್ಯಕ್ಷರಾದ ಡಾ. ಮಂಜುಳಾ ಕೆ.ಟಿ., ಕಾರ್ಯದರ್ಶಿ ಜೀವನ್ ದಾಸ್ ನಾರಾಯಣ್, ಸಹಾಯಕ ಕಾರ್ಯದರ್ಶಿ ಡಾ. ಅರ್ಜುನ್ ನಾಯಕ್, ಸಂಸ್ಥೆಯ ಆಡಳಿತಾಧಿಕಾರಿ ರಾಜಶೇಖರ್ ಹೆಬ್ಬಾರ್, ಆಂಗ್ಲ ಮಾಧ್ಯಮ ಪ್ರೌಢಶಾಲಾ ಸಂಚಾಲಕಿ ಲಲಿತಾಮಲ್ಯ, ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : Raja Marga Column : ಬಹುಮುಖಿ ಸ್ತ್ರೀ; ನೀವು ಕಂಡು ಕೇಳರಿಯದ ಹೆಣ್ಣಿನ ಮುಖಗಳು

ಸಂಸ್ಥೆ ಪ್ರಾಚಾರ್ಯ ಡಾ. ಪ್ರವೀಣ್ ಕೆ ಸಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಶೋಭಿತ ಟಿ.ಎಸ್ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿ ಪ್ರಣಮ್ಯ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು. ಪ್ರಾಧ್ಯಾಪಿಕೆ ರವಿಪ್ರಭಾ ಸಾಧಕ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ನಾಯಕಿ ಶ್ರೇಯ ಸ್ವಾಗತಿಸಿ, ಕಾರ್ಯದರ್ಶಿ ದೀಕ್ಷಾ ವಂದಿಸಿ, ಫಾತಿಮಾ ರೀಮ್ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version