Site icon Vistara News

Surathkal Toll | ಹೆಜಮಾಡಿ ಟೋಲ್ ಗೇಟ್‌‌‌ಗೆ ಸುರತ್ಕಲ್ ಟೋಲ್ ಪ್ಲಾಜಾ ವಿಲೀನ; ಮತ್ತಷ್ಟು ದುಬಾರಿಯಾದ ಸುಂಕ!

Surathkal Toll

ಮಂಗಳೂರು: ಜನರ ಭಾರಿ ವಿರೋಧ ಮತ್ತು ಹೋರಾಟದ ನಡುವೆಯೇ ಕೇಂದ್ರ ಸರ್ಕಾರ ಸುರತ್ಕಲ್ ಟೋಲ್ ಪ್ಲಾಜಾವನ್ನು(Surathkal Toll) ಹೆಜಮಾಡಿ ಟೋಲ್ ಗೇಟ್‌‌‌ಗೆ ವಿಲೀನ ಮಾಡಿದ್ದು, ಅಲ್ಲಿ ಸಂಗ್ರಹಿಸುವ ಟೋಲ್‌ ದರಗಳನ್ನು ಪರಿಷ್ಕರಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಗುರುವಾರ ಪ್ರಕಟಣೆ ಹೊರಡಿಸಿದೆ.

ಜನಾಕ್ರೋಶದ ಹಿನ್ನೆಲೆಯಲ್ಲಿ ಸುರತ್ಕಲ್‌ ಟೋಲ್‌ ಪ್ಲಾಜಾ ರದ್ದು ಮಾಡಲಾಗಿತ್ತು. ಈ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ನ.೧೪ರಂದು ಟ್ವೀಟ್‌ ಮಾಡಿ ತಿಳಿಸಿದ್ದರು. ಇದೀಗ ಅಧಿಕೃತವಾಗಿ ಸುರತ್ಕಲ್ ಟೋಲ್ ಪ್ಲಾಜಾವನ್ನು ಹೆಜಮಾಡಿ ಟೋಲ್ ಗೇಟ್‌‌‌ಗೆ ವಿಲೀನ ಮಾಡಿ ಸುಂಕ ದರಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ | Justice Shivaraj Patil | ರಾಜ್ಯ ಗಡಿ, ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ನ್ಯಾ.ಶಿವರಾಜ್ ಪಾಟೀಲ್ ನೇಮಕ

ಸುರತ್ಕಲ್‌ ಟೋಲ್‌ಗೇಟ್‌ ರದ್ದಾಗಿದ್ದರಿಂದ ಸುಂಕದ ಹೊರೆ ಸ್ವಲ್ಪ ಕಡಿಮೆಯಾದಲಿದೆ ಎಂದು ಭಾವಿಸಿದ್ದ ಜನರಿಗೆ ನಿರಾಸೆಯಾಗಿದೆ. ಏಕೆಂದರೆ, ಹೊಸ ಆದೇಶದಂತೆ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಎಲ್ಲ ವಾಹನಗಳು ಹೆಜಮಾಡಿ ಟೋಲ್ ಗೇಟ್‌ನಲ್ಲಿ ಸುರತ್ಕಲ್ ಪ್ಲಾಜಾದ ಟೋಲ್‌ ಅನ್ನು ಒಟ್ಟು ಸೇರಿಸಿ ಪಾವತಿಸಬೇಕಾಗುತ್ತದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ನಡೆಯನ್ನು ಟ್ರೋಲ್ ಮಾಡಲಾಗುತ್ತಿದೆ.

ಅತ್ಯಂತ ಜನ ವಿರೋಧಿ ಸರ್ಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಇದು ಅತ್ಯಂತ ಕೆಟ್ಟ, ಜನ ವಿರೋಧಿ ನಿರ್ಧಾರ. ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸ ಎಂದು ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀನ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರತ್ಕಲ್ ಟೋಲ್ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿಯಲ್ಲಿ ಸಂಗ್ರಹಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಈಗ ಹೆಜಮಾಡಿಯಲ್ಲಿ ಕಾರಿನ ಟೋಲ್ ದರ ಒಂದು ಬದಿಗೆ 40 ರುಪಾಯಿ ಇದ್ದದ್ದು, 100 ರೂಪಾಯಿ ಆಗುತ್ತದೆ. ಏಳು ವರ್ಷಗಳ ಕಾಲ ಸುರತ್ಕಲ್ ಟೋಲ್ ಗೇಟ್‌ನಲ್ಲಿ ಸಂಗ್ರಹಿಸಿದ ನೂರಾರು ಕೋಟಿ ರೂಪಾಯಿಗೆ ಬೆಲೆಯೇ ಇಲ್ಲ” ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ
ರದ್ದಾಗಿರುವ ಸುರತ್ಕಲ್ ಟೋಲ್ ಪ್ಲಾಜಾದ ಟೋಲ್‌ ಅನ್ನು‌ ಸೇರಿಸಿ ಒಟ್ಟಿಗೆ ಹೆಜಮಾಡಿ ಟೋಲ್ ಗೇಟ್‌ನಲ್ಲಿ ಸುಂಕ ಪಾವತಿಸಬೇಕಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ. ಇನ್ನು ಮುಂದೆ ಕೆಎ 19 ನೋಂದಣಿಯ ಸ್ಥಳೀಯ ಖಾಸಗಿ ವಾಹನಗಳು ಟೋಲ್‌ ಪಾವತಿಸಬೇಕು(ಈ ಹಿಂದೆ ಕೆಎ೧೯ ವಾಹನಗಳಿಗೆ ರಿಯಾಯಿತಿ ಇತ್ತು); ಸುರತ್ಕಲ್‌ನಲ್ಲಿ ಇದ್ದಾಗ ಇದು ಅಕ್ರಮ, ಹೆಜಮಾಡಿಯಲ್ಲಿ ಆಯ್ತು ಸಕ್ರಮ, ಹೇಗಿದೆ ನೋಡಿ ಸಂಸದರ ವಿಕ್ರಮ, ಇಂತಹವರ ಪಡೆದದ್ದು ನಮ್ಮ ಕರ್ಮ!; ಉಡುಪಿ-ಮಂಗಳೂರಿನ ಬುದ್ಧಿವಂತರನ್ನು ಮಂಗ ಮಾಡಿದರು; ನಳಿನ್‌ ಕುಮಾರ್‌ ಅಲ್ಲ ನರಿನ್‌ ಕುಮಾರ್‌; ಎಂದು ವ್ಯಂಗ್ಯವಾಗಿ ನೆಟ್ಟಿಗರು ಟೀಕಿಸಿ ಆಕ್ರೋಶ ಹೊರಹಾಕಿದ್ದಾರೆ.

ಡಿಸೆಂಬರ್‌ 1ರಂತೆ ಅನ್ವಯವಾಗುವಂತೆ ಹೆಜಮಾಡಿ ಟೋಲ್ ಗೇಟ್‌‌‌ ಪರಿಷ್ಕೃತ ಸುಂಕ ದರ

ಸಂಚಾರದ ವಿವರಕಾರು, ಜೀಪ್‌, ವ್ಯಾನ್‌, ಲಘು ವಾಹನಗಳುಲಘು ವಾಣಿಜ್ಯ ಗೂಡ್ಸ್‌ ವಾಹನ, ಮಿನಿ ಬಸ್ಬಸ್‌, ಟ್ರಕ್ಹೆವಿ ಕನ್‌ಸ್ಟ್ರಕ್ಷನ್‌ ಮಷಿನರಿ, ಮಲ್ಟಿ ಆಕ್ಸೆಲ್‌ ವಾಹನ7 ಅಥವಾ ಹೆಚ್ಚು ಆಕ್ಸೆಲ್‌ ವಾಹನಗಳು
ಏಕಮುಖ ಸಂಚಾರ₹100₹170₹355₹550₹675
ದ್ವಿಮುಖ ಸಂಚಾರ₹155₹250 ₹525₹825₹1,005
ಮಾಸಿಕ ಪಾಸ್‌ ₹3,460₹5,590₹11,705₹18,360₹22,350

ಇದನ್ನೂ ಓದಿ | ಮಂಗಳೂರು ಸ್ಫೋಟ | ರಾಜ್ಯದ ಶಿಫಾರಸಿಗೆ ಕಾಯದ ಕೇಂದ್ರ ಸರ್ಕಾರ; 1 ದಿನ ಮೊದಲೇ NIAಗೆ ವರ್ಗಾವಣೆ

Exit mobile version