ಮಂಗಳೂರು: ಮಹಿಳೆಯು ಜಗತ್ತಿನ ಒಂದು ಪ್ರಬಲ ಶಕ್ತಿ. ಮಹಿಳೆ ಮನಸ್ಸು ಮಾಡಿದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಲ್ಲಳು ಎಂದು ಮಂಗಳೂರಿನ ಪ್ರತಿಷ್ಠಿತ ಮಹಾರಾಜ ಹೋಟೆಲಿನ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಕೋಮಲ್ ಪ್ರಭು ಅವರು ಹೇಳಿದರು. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ 2023-2024 ರ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಕೋಮಲ್ ಪ್ರಭು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವೇದಗಳ ಕಾಲದಿಂದಲೂ ಮಹಿಳೆಗೆ ಉತ್ತಮ ಸ್ಥಾನ ನೀಡಲಾಗಿದೆ. ಇಂದು ಮಹಿಳೆ ಕಾಲಿಡದ ಕ್ಷೇತ್ರವಿಲ್ಲ. ಸಾಧಿಸದ ರಂಗವಿಲ್ಲ. ಆಕೆಯ ಸಾಧನೆಗೆ ಪ್ರೋತ್ಸಾಹ ನೀಡಿದಲ್ಲಿ ಮತ್ತಷ್ಟು ಉನ್ನತದ ಸಾಧನೆ ಮೂಡಿಬರಲಿದೆ ಎಂದರು.
ಬಳಿಕ ಮಾತನಾಡಿದ ಡಬ್ಲ್ಯು.ಎನ್.ಇ.ಎಸ್. ನ ಆಡಳಿತಾಧಿಕಾರಿಯಾದ ಪ್ರೊ.ರಾಜಶೇಖರ್ ಹೆಬ್ಬಾರ್ ‘ಬದುಕು ಸಾಧನೆಯ ಹಾದಿಯಾಗಲಿ, ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ಅವಕಾಶಗಳು ಬಂದಾಗ ನಾವೇ ಅದರ ಬೆನ್ನುಹತ್ತಬೇಕು’ ಎಂದರು.
ಕಾರ್ಯಕ್ರಮದಲ್ಲಿ ಡಬ್ಲ್ಯು. ಎನ್.ಇ.ಎಸ್.ನ ಅಧ್ಯಕ್ಷರಾದ ಮಣೇಲ್ ಅಣ್ಣಪ್ಪ ನಾಯಕ್, ಉಪಾಧ್ಯಕ್ಷೆ ಡಾ.ಮಂಜುಳಾ ಕೆ.ಟಿ, ನಿಕಟಪೂರ್ವ ಪ್ರಾಂಶುಪಾಲರಾದ ಡಾ.ಸತೀಶ್ ಕುಮಾರ್ ಶೆಟ್ಟಿ.ಪಿ, ಸಂಘದ ಸರ್ವರಿಗೂ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಮಾರ್ ಕೆ.ಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಸಯ್ಯದ್ ಖಾದರ್, ಅಮುಕ್ತ್ ನ ಅಧ್ಯಕ್ಷರಾದ ಪ್ರೊ.ಗಣೇಶ್ ಪೈ, ಐ.ಕ್ಯೂ.ಎ.ಸಿ ಹಾಗೂ ನ್ಯಾಕ್ ಸಂಚಾಲಕರಾದ ಡಾ.ಸತೀಶ್ ಕೆ, ಡಾ.ಪರಶುರಾಮ್ ಜಿ.ಮಾಳಗೆ, ವಿದ್ಯಾರ್ಥಿ ಸಂಘದ ಸಂಚಾಲಕಿ ಪ್ರೊ.ಶೋಭಿತ ಟಿ.ಎಸ್ ಮತ್ತು ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ Navaratri: ವಿಸ್ತಾರ ‘ನವವರ್ಣ’ ಕರೆಗೆ ಭರ್ಜರಿ ಪ್ರತಿಕ್ರಿಯೆ; ಕೇಸರಿ ರಂಗಲ್ಲಿ ಮಿಂಚಿದ ನಾರಿಯರು