Site icon Vistara News

Heavy Rain | ಸತತ ಮಳೆಯಿಂದ ಹಂಪಿಯ ಪ್ರಸನ್ನ ವಿರೂಪಾಕ್ಷ ದೇಗುಲಕ್ಕೆ ಹಾನಿ

Heavy Rain

ವಿಜಯನಗರ: ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದ (Heavy Rain) ಹೊಸಪೇಟೆ ತಾಲೂಕಿನ ಹಂಪಿಯ ಇತಿಹಾಸ ಪ್ರಸಿದ್ಧ ನೆಲಸ್ತರದ ಶಿವ ದೇವಾಲಯಕ್ಕೆ ಹಾನಿಯಾಗಿದ್ದು, ಭಾರೀ ಮಳೆಗೆ ಪ್ರಸನ್ನ ವಿರೂಪಾಕ್ಷ ದೇಗುಲದ ಮೂರು ಕಲ್ಲಿನ ಕಂಬಗಳು ನೆಲಕ್ಕುರುಳಿವೆ.

ಸತತ ಮಳೆಯಿಂದ ನೆಲಸ್ತರದ ಶಿವನ ದೇಗುಲ ಅಂಗಳ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ಪ್ರಸನ್ನ ವಿರೂಪಾಕ್ಷ ದೇಗುಲದ ಮಂಟಪದ ಮೂರು ಕಲ್ಲಿನ ಕಂಬಗಳ ಜತೆಗೆ ಮಣ್ಣಿನ ತಡೆಗೋಡೆ ಸಹ ಕುಸಿದಿದೆ. ದೇಶ, ವಿದೇಶದಿಂದ ಹಂಪಿ ವೀಕ್ಷಣೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿನ ದೇಗುಲಗಳ ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ಅನುದಾನ ಪಡೆಯುವ ಪುರಾತತ್ವ ಇಲಾಖೆ ಅಧಿಕಾರಿಗಳು ಹಂಪಿಯ ಸ್ಮಾರಕಗಳ ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದಾರೆ ಎಂದು ಸಾರ್ವಜನಿಕರ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Heavy Rain | ಭಾರಿ ಮಳೆಗೆ ನಾಗಮಂಗಲದಲ್ಲಿ 20ಕ್ಕೂ ಕೆಎಸ್‌ಆರ್‌ಟಿಸಿ ಬಸ್‌ ಮುಳುಗಡೆ

Exit mobile version