Site icon Vistara News

Shivamogga News: ನಾಟ್ಯ ತರಂಗ ಸಂಸ್ಥೆಯಿಂದ ನಿರಂತರವಾಗಿ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ: ಸಿ.ಟಿ.ಬ್ರಹ್ಮಾಚಾರ್

Artist C T Brahmachar spoke at a series of dance program at sagara

ಸಾಗರ: ನಾಟ್ಯ ತರಂಗ ಸಂಸ್ಥೆ ನಿರಂತರವಾಗಿ ನೃತ್ಯ (Dance), ಸಂಗೀತ (Music), ಯಕ್ಷಗಾನದಂತಹ (Yakshagana) ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿರುವುದು ಅನುಕರಣೀಯ ಸಂಗತಿ ಎಂದು ರಂಗಕರ್ಮಿ ಸಿ.ಟಿ.ಬ್ರಹ್ಮಾಚಾರ್ ತಿಳಿಸಿದರು.

ಇಲ್ಲಿನ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಭಾನುವಾರ ನಾಟ್ಯತರಂಗ ಸಂಸ್ಥೆ ವತಿಯಿಂದ ಸರಣಿ ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭರತನಾಟ್ಯವನ್ನು ಜನಪ್ರಿಯಗೊಳಿಸುವ ಜತೆಗೆ ಅದನ್ನು ಜನರ ಬಳಿಗೆ ತೆಗೆದುಕೊಂಡು ಹೋದ ಹೆಗ್ಗಳಿಕೆ ನಾಟ್ಯತರಂಗ ಸಂಸ್ಥೆಯ ವಿದ್ವಾನ್ ಜನಾರ್ದನ್ ಅವರಿಗೆ ಸಲ್ಲುತ್ತದೆ. ಪ್ರತಿ ತಿಂಗಳು ಹೆಸರಾಂತ ನೃತ್ಯಗಾರರನ್ನು ಕರೆಸಿ ವೈವಿಧ್ಯಮಯ ನೃತ್ಯವನ್ನು ಸ್ಥಳೀಯವಾಗಿ ಪರಿಚಯಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಜತೆಗೆ ಹೊಸ ಹೊಸ ನೃತ್ಯಗಾರರನ್ನು ವೇದಿಕೆಗೆ ತರುವ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇದನ್ನೂ ಓದಿ: DP Manu: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಮಿಂಚಿದ ಕನ್ನಡಿಗ ಮನು; ಯಾರಿವರು? ಇವರ ಹಿನ್ನೆಲೆ, ಸಾಧನೆ ಏನೇನು?

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಟ್ಯತರಂಗ ಸಂಸ್ಥೆ ಮುಖ್ಯಸ್ಥ ಜಿ.ಬಿ.ಜನಾರ್ದನ್, ಸಂಗೀತ, ನೃತ್ಯದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಸಾವಿರಾರು ಮಕ್ಕಳು ನಮ್ಮಲ್ಲಿ ನೃತ್ಯಾಭ್ಯಾಸ ನಡೆಸಿ ದೇಶದ ಮೂಲೆಮೂಲೆಗಳಲ್ಲಿ ಪ್ರದರ್ಶನ ನೀಡುತ್ತಿರುವುದು ನಮಗೆ ಹೆಮ್ಮೆ ತರುತ್ತಿದೆ ಎಂದು ತಿಳಿಸಿದರು.

ನಂತರ ಶಿವಮೊಗ್ಗದ ಸೌಮ್ಯ ರಂಗಸ್ವಾಮಿ ಅವರಿಂದ ಒಡಿಸ್ಸಿ ನೃತ್ಯ, ಬೆಂಗಳೂರಿನ ಅನುರಾಧ ಹೆಗಡೆ ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.

ಇದನ್ನೂ ಓದಿ: Gold Rate Today: ಏರಿಳಿಯದ ಬಂಗಾರದ ಬೆಲೆ, ಬೆಂಗಳೂರಲ್ಲಿ ಹೀಗಿದೆ ದರ

ಸಿಂಚನಾ ಸ್ವಾಗತಿಸಿದರು. ಅನುಷಾ ವಂದಿಸಿದರು. ಶಮಾ ನಿರೂಪಿಸಿದರು.

Exit mobile version