Site icon Vistara News

Dance Workshop: ಜೂನ್‌ 11ರಂದು ʼಡಾನ್ಸ್‌ ವಿತ್‌ ಡಿʼ ಕಾರ್ಯಾಗಾರ; ಧರ್ಮೇಶ್‌ ಯೆಲಾಂಡೆ ಭಾಗಿ

Dance with D workshop

#image_title

ಬೆಂಗಳೂರು: ಆರವ್‌ ನೃತ್ಯ ಅಕಾಡೆಮಿ ವತಿಯಿಂದ ನಗರದ ಕಾವೇರಿ ಭವನದ ಎದುರಿನ ಶಿಕ್ಷಕರ ಸದನದಲ್ಲಿ ಜೂನ್‌ 11ರಂದು ʼಡಾನ್ಸ್‌ ವಿತ್‌ ಡಿʼ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬಾಲಿವುಡ್‌ ಖ್ಯಾತ ನೃತ್ಯಗಾರ ಹಾಗೂ ನೃತ್ಯ ಸಂಯೋಜಕ ಧರ್ಮೇಶ್‌ ಯೆಲಾಂಡೆ ಅವರು ಕಾರ್ಯಾಗಾರದಲ್ಲಿ (Dance Workshop) ಭಾಗವಹಿಸಲಿದ್ದು, ನೃತ್ಯಾಸಕ್ತರಿಗೆ ಸಲಹೆಗಳನ್ನು ನೀಡಲಿದ್ದಾರೆ.

ಈ ಕಾರ್ಯಾಗಾರವು ಹೊಸ ಪ್ರತಿಭೆಗಳಿಗೆ ನೃತ್ಯದ ಕುರಿತು ಕಲಿಕೆಗೆ ಸಾಕಷ್ಟು ಅನುಕೂಲವಾಗಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಆರವ್‌- 8904757714, ಚೇತನ್‌- 9844539436 ಸಂಖ್ಯೆ ಸಂಪರ್ಕಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ ಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ | BSPF 2023: ಬೆಂಗಳೂರು ಕಿರುನಾಟಕೋತ್ಸವಕ್ಕೆ ನಾಟಕ ಆಹ್ವಾನ

ಧರ್ಮೇಶ್‌ ಯೆಲಾಂಡೆ ಅವರು ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟ ಹಾಗೂ ಕೊರಿಯೊಗ್ರಾಫರ್‌ ಆಗಿ ಕೆಲಸ ಮಾಡಿದ್ದಾರೆ. ಹಿಂದಿಯ ಎಬಿಸಿಡಿ, ಎಬಿಸಿಡಿ 2, ಸ್ಟ್ರೀಟ್ ಡಾನ್ಸರ್‌ 3ಡಿ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಇವರು ನಗರದಲ್ಲಿ ಏರ್ಪಡಿಸಿರುವ ಕಾರ್ಯಾಗಾರದಲ್ಲಿ ಭಾಗವಹಿಸಿ ನೃತ್ಯಾಸಕ್ತರಿಗೆ ಸಲಹೆಗಳನ್ನು ನೀಡಲಿದ್ದಾರೆ.

Exit mobile version