ವಿಜಯನಗರ : ʻಹಾಯ್ ಫ್ರೆಂಡ್ಸ್ ನಾನು ನಿಮ್ಮ ಸಕ್ಕರೆ ನಾಡು ದೀಪಕ್ ಗೌಡʼʼ ಎಂದು ಹೇಳುತ್ತಲೇ ಖ್ಯಾತಿ ಪಡೆದ ದೀಪಕ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಾಳೇನಹಳ್ಳಿಯ ದೀಪಕ್ ಗೌಡ ಹಂಪಿಯ ಹೇಮಕೂಟ ಪರ್ವತದಲ್ಲಿ ಸ್ಮಾರಕದ ಮೇಲೇರಿ ನೃತ್ಯ ಮಾಡಿ ರೀಲ್ಸ್ ವಿಡಿಯೊ ಮಾಡಿ ಹರಿ ಬಿಟ್ಟಿದ್ದ. ಇದೀಗ ಯುವಕನನ್ನು ಹಂಪಿ ಪ್ರವಾಸಿ ಠಾಣೆಯ ಪೊಲೀಸರು ಮಾರ್ಚ್ 3ರಂದು ಬಂಧಿಸಿದ್ದಾರೆ. ದೀಪಕ್ ಗೌಡ ತಮ್ಮ ನಾನ್ ಸ್ಟಾಪ್ ಮಾತುಗಳಿಗೂ ತುಂಬ ಫೇಮಸ್ಸು. ಜತೆಗೆ ಒಂದಿಷ್ಟು ಜೋಕ್ ಹೇಳುವುದಲ್ಲದೇ, ಡಾನ್ಸ್ ಕೂಡ ಮಾಡುತ್ತಾನೆ.
ಇತ್ತೀಚೆಗೆ ದೀಪಕ್ ಗೌಡ ಹಂಪಿಯ ದೇವಾಲಯದಲ್ಲಿ ಕೇಳಿಸದೇ ಕಲ್ಲು, ಕಲ್ಲಿನಲಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೊ ಸಖತ್ ವೈರಲ್ ಆಗಿತ್ತು. ಪುರಾತತ್ವ ಇಲಾಖೆಯ ಅಧಿಕಾರಿಗಳು ಫೆ.28ರಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಸಂರಕ್ಷಿತ ಸ್ಮಾರಕಗಳ ಹಾನಿ, ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Instagram Influencer : ಹೆದ್ದಾರಿಯಲ್ಲಿ ರೀಲ್ಸ್ ಮಾಡಿದರು, 17,000 ರೂ. ದಂಡ ತೆತ್ತರು
ಇದೀಗ ಕಂಡ ಕಂಡ ದೇವಾಲಯಗಳ ಬಳಿ ನೃತ್ಯ ಮಾಡುವ ದೀಪಕ್ ಗೌಡ ಈಗ ತಮ್ಮ ಡಾನ್ಸ್‌ನಿಂದಲೇ ಪೇಚಿಗೆ ಸಿಲುಕಿಕೊಂಡಿದ್ದಾನೆ.