Site icon Vistara News

Davanagere Chitrasanthe: ಚಿತ್ರಕಲಾ ಪರಿಷತ್‌ನಿಂದ ಫೆ.26ರಂದು ದಾವಣಗೆರೆ ಚಿತ್ರಸಂತೆ

Davanagere Chitrasanthe

#image_title

ದಾವಣಗೆರೆ: “ಚಿತ್ರಕಲಾ ಪರಿಷತ್‌ನಿಂದ 2ನೇ ವರ್ಷದ ದಾವಣಗೆರೆ ಚಿತ್ರಸಂತೆಯನ್ನು (Davanagere Chitrasanthe) ಭಾನುವಾರ (ಫೆ.26) ದಂದು ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದೆ” ಎಂದು ಮಾಜಿ ಮೇಯರ್ ಹಾಗೂ ಚಿತ್ರಸಂತೆ ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ಜಿ‌.ಅಜಯ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಫೆ.26 ರಂದು ಬೆಳಗ್ಗೆ 8 ರಿಂದ ಸಂಜೆ 7 ಗಂಟೆವರೆಗೂ “ಚಿತ್ರ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ” ಎಂದರು.

ಇದನ್ನೂ ಓದಿ: 7th Pay commission : ಮಾ.1 ರಿಂದ ಸರ್ಕಾರಿ ನೌಕರರ ಮುಷ್ಕರ ಖಚಿತ; ಆಸ್ಪತ್ರೆ, ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಸೇವೆ ಬಂದ್‌

“ಎವಿಕೆ ರಸ್ತೆಯಲ್ಲಿನ ಶ್ರೀರಾಮ ದೇವಸ್ಥಾನದಿಂದ ಬಿ.ಎಸ್. ಚನ್ನಬಸಪ್ಪ ಶಾಪ್‌ವರೆಗೂ ಎರಡು ಮಹಾದ್ವಾರ ನಿರ್ಮಾಣ ಮಾಡಲಾಗಿದೆ. ಫೆ.26 ರಂದು ಬೆಳಗ್ಗೆ 10.30ಕ್ಕೆ ಸಂಸದ ಜಿ.ಎಂ ಸಿದ್ದೇಶ್ವರ್ ಅವರು ಚಿತ್ರಸಂತೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎಸ್.ಎ ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಎಸ್.ವಿ.ರಾಮಚಂದ್ರ ಮತ್ತಿತರರು ಆಗಮಿಸಲಿದ್ದಾರೆ. ಮಾಜಿ ಮೇಯರ್ ಬಿ.ಜಿ ಅಜಯ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ” ಎಂದು ವಿವರಿಸಿದರು.

“ಚಿತ್ರ ಸಂತೆಗೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ರಾಜಸ್ಥಾನ ಸಹಿತ ಎಲ್ಲೆಡೆಯಿಂದ ಒಟ್ಟು 130 ಕಲಾವಿದರು ಭಾಗವಹಿಸಲಿದ್ದಾರೆ. ಹೊರಗಿನಿಂದ ಬರುವ ಕಲಾವಿದರಿಗೆ ವಸತಿ ವ್ಯವಸ್ಥೆ, ಮಳಿಗೆ ಹಾಕುವ ಎಲ್ಲ ಕಲಾವಿದರಿಗೆ ದಾವಣಗೆರೆ ಬೆಣ್ಣೆ ದೋಸೆ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ” ಎಂದರು.

ಇದನ್ನೂ ಓದಿ: Basavaraja Bommai : ಎಲ್ಲ ಮುಖ್ಯಮಂತ್ರಿಗಳ ಆಡಳಿತ ಅನಾವರಣಕ್ಕೆ ಮ್ಯೂಸಿಯಂ ಸ್ಥಾಪನೆ ಪ್ರತಿಪಾದಿಸಿದ ಬೊಮ್ಮಾಯಿ

“ಚಿತ್ರಸಂತೆಯಲ್ಲಿ ಪ್ರತಿಭಾವಂತ ಕಲಾವಿದರಿಗೆ, ಉತ್ತಮ ಮಳಿಗೆ ಗುರುತಿಸಿ 9 ಬಹುಮಾನ ನೀಡಲಾಗುತ್ತಿದೆ. ಚಿತ್ರಸಂತೆಯ ತೀರ್ಪುಗಾರರಾಗಿ ಹಿರಿಯ ವ್ಯಂಗ್ಯ ಚಿತ್ರ ಕಲಾವಿದರಾದ ಎಚ್.ಬಿ. ಮಂಜುನಾಥ್ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ, ಚಿತ್ರಕಲೆ ಮಾರುಕಟ್ಟೆ ತಜ್ಞರಾದ ರಷ್ಮಿ ಸುತಾರ್ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 3ರಿಂದ 4 ಗಂಟೆಯೊಳಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದರು.

“ಅಂದು ಸಂಜೆ 5.15ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ದಾವಣಗೆರೆ ವಿವಿ ಕುಲಪತಿ ಬಿ.ಡಿ ಕುಂಬಾರ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿ.ಪಂ ಸಿಇಒ ಡಾ.ಎ.ಚೆನ್ನಪ್ಪ, ಬಿಜೆಪಿ ರೈತ ಮೋರ್ಚಾ ರಾಜ್ಯ ಸಂಚಾಲಕ ಸತೀಶ್ ಕೊಳೆನಹಳ್ಳಿ, ಸೈಯದ್ ಸೈಫುಲ್ಲಾ, ತೇಜಸ್ವಿ ಪಟೇಲ್ ಭಾಗವಹಿಸಲಿದ್ದಾರೆ” ಎಂದರು.

ಸುದ್ದಿಗೋಷ್ಠಿಯಲ್ಲಿ ಡಿ.ಶೇಷಾಚಲ, ರವಿ ಹುದ್ದಾರ್, ಸಂತೋಷ್, ಮಯೂರ್, ಗಣೇಶ್ ಆಚಾರ್, ಅಶೋಕ್ ಗೋಪನಾಳ್, ಶಿವಕುಮಾರ್, ಚನ್ನಬಸವನ ಗೌಡ್ರು, ಅನಿಲ್, ದಿವಾಕರ್, ರವಿ ಇದ್ದರು.

ಇದನ್ನೂ ಓದಿ: IPL 2023: ಹಾಲಿ ಚಾಂಪಿಯನ್​ ಗುಜರಾತ್​ ತಂಡಕ್ಕೆ ಹಿನ್ನಡೆ; ಸ್ಟಾರ್​ ಆಟಗಾರ ಟೂರ್ನಿಯಿಂದ ಔಟ್​

Exit mobile version