Site icon Vistara News

Davanagere News: ಶಿವಮೊಗ್ಗ ಗಲಭೆ ಆರೋಪಿಗಳನ್ನು ಎನ್‌ಕೌಂಟರ್ ಮಾಡಿ: ಎಂ.ಪಿ.ರೇಣುಕಾಚಾರ್ಯ

Ex minister MP Renukacharya latest statement at honnali

ಹೊನ್ನಾಳಿ: ಶಿವಮೊಗ್ಗ ಗಲಾಟೆ ಪ್ರಕರಣದ ಆರೋಪಿಗಳನ್ನು (Accused) ಬಂಧಿಸಿದರೆ ಸಾಲದು. ಅವರನ್ನು ಎನ್‌ಕೌಂಟರ್ (Encounter) ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ (MP Renukacharya) ಒತ್ತಾಯಿಸಿದರು.

ಹೊನ್ನಾಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಹಿಂದುಗಳ ಮನೆಗಳು ಜಖಂ ಆಗಿದ್ದು, ಕೂಡಲೇ ಅವರಿಗೆ ಪರಿಹಾರ ನೀಡಿ, ಅವರ ನೆರವಿಗೆ ಧಾವಿಸಬೇಕು ಎಂದು ಹೇಳಿದರು.

ಸರ್ಕಾರವೇ ಮುಸ್ಲಿಮರ ತುಷ್ಟೀಕರಣಕ್ಕೆ ಮುಂದಾಗಿದ್ದು, ಇದರಿಂದ ಪ್ರಚೋದನೆಗೆ ಒಳಗಾದ ಕೆಲ ಪುಂಡರು ಈ ರೀತಿಯ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ ಅವರು, ಇಂಥ ಪುಂಡರನ್ನು ಬಂಧಿಸಿ ತಕ್ಕ ಶಿಕ್ಷೆ ಕೊಡಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪುಂಡಾಟಿಕೆ ಮಾಡಿ ಶಾಂತಿ ಕದಡುವಂತ ಕೆಲಸವನ್ನು ಮಾಡುತ್ತಾರೆ ಎಂದ ಅವರು, ಯಾವುದೇ ಕಾರಣಕ್ಕೂ ಸರ್ಕಾರ ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣಗಳನ್ನು ವಾಪಸ್ಸು ಪಡೆಯಬಾರದು ಎಂದು ಅವರು ಸರ್ಕಾರಕ್ಕೆ‌ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Sirsi News: ಶಿರಸಿಯಲ್ಲಿ ಪಾಳು ಬಿದ್ದ ರಾಜ್ಯದ ಪ್ರಥಮ ಮೊಲ ಸಾಕಾಣಿಕಾ ಕೇಂದ್ರ

ಶಿವಮೊಗ್ಗದಲ್ಲಿ ನಡೆದ ಗಲಾಟೆಗೆ ಬಿಜೆಪಿ ಕಾರ್ಯಕರ್ತರು ಕಾರಣ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದು ಖಂಡನೀಯ. ರಾಮಲಿಂಗಾ ರೆಡ್ಡಿ ಅವರು ಹಿರಿಯ ಸಚಿವರು ಇಂತಹ ಹೇಳಿಕೆಗಳನ್ನು ಕೊಡುವುದು ಸಮಂಜಸವಲ್ಲ, ಹಿಂದುಗಳು ಯಾರೂ ಕೂಡ ಈ ರೀತಿಯ ಕೃತ್ಯ ಎಸಗುವುದಿಲ್ಲ, ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಯಾಚಿಸ‌ಬೇಕು ಎಂದು ಆಗ್ರಹಿಸಿದರು.

ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದನ್ನು ಮೊದಲು ಕಾಂಗ್ರೆಸ್‌ನ ಸಚಿವರು ಬಿಡಬೇಕು ಎಂದ ಅವರು, ಶಿವಮೊಗ್ಗ ಗಲಾಟೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ, ಜಿಲ್ಲಾಡಳಿತದ ನಿರ್ಲಕ್ಷವೇ ಗಲಾಟೆಗೆ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Shivamogga News: ಸಾಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ; ಆರೋಪಿ ಬಂಧನ

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸುರೇಶ್ ಜಿ.ಕೆ., ದಿಡಗೂರು ಫಾಲಾಕ್ಷಪ್ಪ, ಪಲ್ಲವಿ ರಾಜು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ ನಾಯಕ, ಫಾಲಾಕ್ಷಪ್ಪ ಎಚ್.ಎಸ್., ಮಾಜಿ ಪುರಸಭೆ ಅಧ್ಯಕ್ಷ ರಂಗಪ್ಪ, ಮಾಜಿ ಪುರಸಭೆ ಅಧ್ಯಕ್ಷ ಕೆ ವಿ ಶ್ರೀಧರ್, ತರಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಬೀರಪ್ಪ, ಮಹೇಶ್ ಹುಡೆದ್ , ಚೆನ್ನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version