ಹೊನ್ನಾಳಿ: ಸರ್ಕಾರವು (Government) ರೈತರ (Farmers) ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಏಳು ಗಂಟೆ ವಿದ್ಯುತ್ (Power) ನೀಡಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಹೊನ್ನಾಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ರೈತರು ಪಂಪ್‌ಸೆಂಟ್ ನಂಬಿ ಬೆಳೆ ಬೆಳೆಯುತ್ತಿದ್ದಾರೆ, ನಮ್ಮ ಸರ್ಕಾರದ ಅವಧಿಯಲ್ಲಿ ಏಳು ಗಂಟೆ ಕರಂಟ್ ನೀಡುತಿದ್ದೇವು, ಆದರೆ ಈ ಸರ್ಕಾರ ದಿಢೀರ್ 4 ಗಂಟೆ ಮಾಡಿದೆ. ರೈತರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ, ನಾನು ಸಿಎಂ, ಡಿಸಿಎಂ, ಸಂಬಂಧಪಟ್ಟ ಸಚಿವರಿಗೆ ಒತ್ತಾಯ ಮಾಡುತ್ತೇನೆ, ನೀವು ವಿದ್ಯುತ್ ಖರೀದಿ ಮಾಡಬೇಕು, ಇಲ್ಲವೇ ಉತ್ಪಾದನೆ ಮಾಡಿಯಾದರೂ ರೈತರಿಗೆ ಏಳು ಗಂಟೆ ನಿರಂತರ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Assembly Election 2023: 5 ರಾಜ್ಯಗಳಲ್ಲಿ ಚುನಾವಣೆ ದಿನಾಂಕ ಘೋಷಣೆ; ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾಳಾಗಿದ್ದು ಸೂಕ್ತ ಪರಿಹಾರ ನೀಡಬೇಕು. ರೈತರ ಬದುಕು ಚಿಂತಾಜನಕವಾಗಿದ್ದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಸರ್ಕಾರ ರೈತರ ಮನೆ ಬಾಗಿಲಿಗೆ ಧಾವಿಸಬೇಕು ಎಂದು ಒತ್ತಾಯಿಸಿದ ಅವರು, ಕರ್ನಾಟಕ ಕತ್ತಲಮಯ ರಾಜ್ಯವಾಗುತ್ತಿದ್ದು, ಸರ್ಕಾರ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಹೇಳಿದರು.
ಕೂಡಲೇ ರೈತರಿಗೆ ದಿನಕ್ಕೆ ಏಳು ಗಂಟೆ ನಿರಂತರ ವಿದ್ಯುತ್ ನೀಡದಿದ್ದರೆ ರೈತರು ಹಾಗೂ ಪಕ್ಷದ ಮುಖಂಡರ ಜತೆ ಹೋರಾಟಕ್ಕೆ ಸಜ್ಜಾಗುತ್ತೇನೆ ಎಂದು ಎಚ್ಚರಿಸಿದರು.
ಇದನ್ನೂ ಓದಿ:UPSC exam: ಕಟ್‌ಆಫ್ ಅವಧಿಯ ಫಾರಂ ಕೊಡದಿದ್ದರೆ EWS ಕೋಟಾ ಮೀಸಲು ಇಲ್ಲ: ಸುಪ್ರೀಂ ಕೋರ್ಟ್
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಎಂ. ಕುಬೇರರೆಡ್ಡಿ, ಅಶ್ವಿನಿ, ಬೆನಕಪ್ಪ ಬೇಲೆ ಮಲ್ಲೂರ್, ಮಹೇಶ್ ಹುಡೆದ್, ಧರ್ಮಣ್ಣ, ಬಾಬು ಹೋಬಳದಾರ್, ಶ್ರೀಧರ್, ಎಂ.ಎಸ್. ಪಾಲಾಕ್ಷಪ್ಪ, ಪಲ್ಲವಿ ರಾಜು. ಇಂಚರ ಮಂಜು ಹಾಗೂ ಪಕ್ಷದ ಮುಖಂಡರು, ಇತರರು ಪಾಲ್ಗೊಂಡಿದ್ದರು.