Site icon Vistara News

Davanagere News: ಅರಬಗಟ್ಟೆ ಗ್ರಾಮ ಸಮಸ್ಯೆಗಳ ಆಗರ, ಮೂಲ ಸೌಕರ್ಯ ಒದಗಿಸುವಂತೆ ಜನ ಆಗ್ರಹ

Gomala of Arabgatte village of Honnali taluk without infrastructure

-ಸುರೇಶ್ ಬಿ ಹೊನ್ನಾಳಿ

ಹೊನ್ನಾಳಿ: ತಾಲೂಕಿನ ಅರಬಗಟ್ಟೆ ಗ್ರಾಮದ ಗೋಮಾಳವು ಸಮಸ್ಯೆಗಳ (Problems) ಆಗರವೇ ಆಗಿದ್ದು, ಕನಿಷ್ಠ ಮೂಲಸೌಕರ್ಯಗಳಿಂದ (infrastructure) ವಂಚಿತವಾಗಿದೆ. ಹೊನ್ನಾಳಿಯಿಂದ 8 ಕಿಲೋ ಮೀಟರ್ ದೂರದಲ್ಲಿರುವ ಅರಗಬಟ್ಟೆ ಗ್ರಾಮ ಗೋಮಾಳದಲ್ಲಿ ತಗಡು ಮತ್ತು ಹಂಚುಗಳ ಶೆಡ್ ಹಾಕಿಕೊಂಡು ಕಳೆದ ಎರಡು ವರ್ಷಗಳಿಂದ 35 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಆದರೆ ಗ್ರಾಮದ ಗೋಮಾಳಕ್ಕೆ ಮೂಲ ಸೌಕರ್ಯ ಗಗನ ಕುಸುಮವಾಗಿದೆ.

ಈ ಕುರಿತು ಸ್ಥಳೀಯ ಶಾಸಕ ಡಿಜಿ ಶಾಂತನಗೌಡ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರಿಗೆ ಮತ್ತು ಗ್ರಾಮ ಪಂಚಾಯಿತಿ ಕಚೇರಿ, ಇಒ ಹಾಗೂ ಜಿಲ್ಲಾಧಿಕಾರಿಗಳಿಗೆ, ನಮಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ ಯಾವ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗಳಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡರು.

ಇದನ್ನೂ ಓದಿ: ACC Emerging Asia Cup 2023: ಯಶ್‌ ಧುಲ್‌ ಶತಕ; ಭಾರತಕ್ಕೆ ಗೆಲುವಿನ ಶುಭಾರಂಭ

ಗ್ರಾಮದಲ್ಲಿ ನಮ್ಮ ಮನೆಗಳು ಚಿಕ್ಕದಾಗಿದ್ದು ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರಿಂದ ಕುಟುಂಬ ಹೊರ ಬಂದೆವು. ಆದರೆ ನಮಗೆ ಬೇರೆ ಮನೆಗಳು ಇಲ್ಲದ ಕಾರಣ ನಾವು ಗ್ರಾಮದ ಸರ್ವೇ ನಂಬರ್ 113 ಹಾಗೂ 115ರಲ್ಲಿ 35 ಶೆಡ್ಡುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. 20 ಜಾನುವಾರಗಳು 800 ಕುರಿಗಳನ್ನು ಇಲ್ಲೇ ತಂದು ಸಾಕಿದ್ದೇವೆ ಎಂದರು.

ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಇಲ್ಲ

ಗ್ರಾಮದ ಗೋಮಾಳದಲ್ಲಿ ಕುಡಿಯುವ ನೀರಿನ ಸೌಲಭ್ಯ ಹಾಗೂ ವಿದ್ಯುತ್‌ ಸೌಕರ್ಯವಿಲ್ಲ. ಜತೆಗೆ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಿದ್ಯುತ್‌ ಇಲ್ಲದ ಹಿನ್ನಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ಸಮಸ್ಯೆಯಾಗಿದೆ. ಹಾಗೆಯೇ, ವಿಷ ಜಂತುಗಳು ಮನೆಯೊಳಗೆ ಬರುತ್ತಿವೆ, ಇದರಿಂದ ರಾತ್ರಿ ಮಲಗುವುದಕ್ಕೂ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯ ನಿವಾಸಿ ಸವಿತಮ್ಮ ತಿಳಸಿದ್ದಾರೆ.

ಇದನ್ನೂ ಓದಿ: Weather report : 4 ದಿನ ಮಳೆ ಅಬ್ಬರ; ದಕ್ಷಿಣ ಒಳನಾಡಿನಲ್ಲಿ ಚಕ್ಕರ್‌, ಕರಾವಳಿಯಲ್ಲಿ ಹಾಜರ್‌

ಕೆಲ ದಿನಗಳ ಹಿಂದೆ ಡಿಸಿ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ದೆವು. ಜಿಲ್ಲಾಧಿಕಾರಿಗಳು ತಾಲೂಕು ಪಂಚಾಯಿತಿಗೆ ಪತ್ರ ಬರೆದು ಅಲ್ಲಿನ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದ್ದರು. ಆದರೆ ಈವರೆಗೂ ತಾಲೂಕು ಪಂಚಾಯಿತಿ ಆಗಲಿ ಅಥವಾ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು ಅಥವಾ ಪಿಡಿಒ ಆಗಲಿ ಇತ್ತ ತಿರುಗಿಯೂ ನೋಡಿಲ್ಲ ಎಂದು ನಿವಾಸಿಗಳು ದೂರಿದರು.

ಈಗಾಗಲೇ ಹಲವು ಬಾರಿ ನಮ್ಮ ಸಮಸ್ಯೆಯ ಕುರಿತು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಇನ್ನೊಂದು ವಾರದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿ ಕಚೇರಿ ಎದುರು ಕುರಿ ಹಾಗೂ ಜಾನುವಾರುಗಳ ಸಮೇತ ಮನೆ ಮಂದಿಯಲ್ಲ ಬಂದು ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಗೋಮಾಳದಲ್ಲಿ ಸ್ಥಳೀಯ ನಿವಾಸಿಗಳು ಮೂಲಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು.

ಶಾಲೆಯಲ್ಲಿ ಹೋಂ ವರ್ಕ್ ಕೊಟ್ಟಿರುತ್ತಾರೆ. ಆದರೆ ಹೋಂ ವರ್ಕ್ ಮಾಡಲು ಮನೆಯಲ್ಲಿ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ, ವಿದ್ಯಾಭ್ಯಾಸಕ್ಕೆ ತುಂಬ ತೊಂದರೆಯಾಗುತ್ತಿದೆ ಹೀಗಾಗಿ ನಮಗೆ ವಿದ್ಯುತ್ ಹಾಗೂ ನೀರು ಒದಗಿಸುವಂತೆ ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Central Bank Recruitment 2023 : 1000 ಮ್ಯಾನೇಜರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

ಮೂಲಭೂತ ಸೌಕರ್ಯಗಳಿಲ್ಲದೇ ಒದಗಿಸುವಂತೆ ಹಲವಾರು ಮನವಿ ಮಾಡಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮಗೆ ಯಾವ ಸೌಕರ್ಯವನ್ನು ಒದಗಿಸಿಕೊಡುತ್ತಿಲ್ಲ, ಕೂಡಲೇ ತಾಲೂಕು ಆಡಳಿತ ಹಾಗೂ ಗ್ರಾ. ಪಂ ಎಚ್ಚೆತ್ತುಕೊಂಡು ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ.

-ತಿಪ್ಪೇಶಪ್ಪ, ಗ್ರಾಪಂ ಮಾಜಿ ಅಧ್ಯಕ್ಷ

Exit mobile version