ಹೊನ್ನಾಳಿ: ತಾಲೂಕಿನ ಹೊಟ್ಯಾಪುರ ಹಿರೇಮಠದ ಪೀಠಾಧಿಪತಿ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ (Shri Girisiddeshwara Shivacharya Swamiji) ಸೋಮವಾರ ಬೆಳಗ್ಗೆ ಶಿವಾಧೀನರಾದರು.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಗಿನ ಜಾವ ಶಿವಾಧೀನರಾಗಿದ್ದಾರೆ.
ಶ್ರೀಗಳ ಮಾತೃಶ್ರೀ 91 ವರ್ಷದ ಪಾರ್ವತಮ್ಮ ಅವರು ಶ್ರೀ ಮಠಕ್ಕೆ ಆಗಮಿಸಿ, ಸ್ವಾಮೀಜಿಯವರ ಅಂತಿಮ ದರ್ಶನ ಪಡೆದು ತೀವ್ರ ದುಃಖತಪ್ತರಾಗಿದ್ದರು.
ಶ್ರೀ ಮಠಕ್ಕೆ ಯಡಿಯೂರಿನ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು ಆಗಮಿಸಿ, ಶಿವಾಧೀನರಾದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದು ಮಾತನಾಡಿದರು.
ಹೊನ್ನಾಳಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಭಕ್ತಾದಿಗಳು ಶ್ರೀಮಠಕ್ಕೆ ಆಗಮಿಸಿ, ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆದರು.
ಶಿವಾಧೀನರಾದ ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಕ್ರಿಯಾ ಸಮಾಧಿಯನ್ನು ಹೊಟ್ಯಾಪುರದ ಹಳೇಮಠದಲ್ಲಿ ನೆರವೇರಿಸಲಾಗುವುದೆಂದು ಶ್ರೀಮಠದ ಭಕ್ತಾದಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: China Borehole: ಭೂಮಿಗೆ ಭಾರೀ ರಂಧ್ರ ಕೊರೆಯಲು ಶುರು ಮಾಡಿದ ಚೀನಾ, ಏನಿದೆ ಅಲ್ಲಿ, ಇದರ ಉದ್ದೇಶವೇನು?