ಹೊನ್ನಾಳಿ: ರಾಜ್ಯಮಟ್ಟದ ಕೃಷಿ ಮೇಳವನ್ನು (Krishi mela) ಮಾದನಬಾವಿ ಗ್ರಾಮದಲ್ಲಿ ಅಕ್ಟೋಬರ್ (October) ಕೊನೆಯ ವಾರದಲ್ಲಿ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಿದ್ದು, ಅವಳಿ ತಾಲೂಕಿನ ಜನತೆ ಸಹಕಾರ ನೀಡಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಮನವಿ ಮಾಡಿದರು.
ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ದೇವಸ್ಥಾನದ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಮೇಳ ಆಯೋಜಿಸುವ ಕುರಿತು ಗ್ರಾಮಸ್ಥರ ಹಾಗೂ ಅವಳಿ ತಾಲೂಕಿನ ಮುಖಂಡರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕೃಷಿ ಮೇಳ ನಡೆಸುವುದರಿಂದ ರೈತರಿಗೆ ಕೃಷಿಯ ಬಗ್ಗೆ ಜ್ಞಾನ, ಆಧುನಿಕ ಪರಿಕರಣಗಳ ಬಗ್ಗೆ ಮಾಹಿತಿ, ಕೃಷಿ ತಜ್ಞರಿಂದ ಉಪನ್ಯಾಸ ಏರ್ಪಡಿಸುವುದು ಸೇರಿದಂತೆ ಜವಾಬ್ದಾರಿ ಕೆಲಸ ಇರುತ್ತದೆ, ಗ್ರಾಮಸ್ಥರು, ಕೃಷಿ ಅಧಿಕಾರಿಗಳು, ರೈತ ಸಂಘಟನೆಗಳು ಸೇರಿ ಕೃಷಿ ಮೇಳವನ್ನು ಯಶಸ್ವಿಗೊಳಿಸೋಣ ಎಂದು ತಿಳಿಸಿದರು.
ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ
ಸರ್ಕಾರದಿಂದ ದೊರೆಯುವ ನೆರವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕರರು ಇದೇ ವೇಳೆ ಭರವಸೆ ನೀಡಿದರು.
ಅಕ್ಟೋಬರ್ 25, 26 ಮತ್ತು 27 ಮೂರು ದಿನ ಕೃಷಿ ಮೇಳವನ್ನು ಕುಮಟಾ – ಕಾರವಾರ ಹೆದ್ದಾರಿ ಪಕ್ಕದಲ್ಲಿರುವ ಗವಿಸಿದ್ದೇಶ್ವರ ದೇವಸ್ಥಾನದ 12 ಎಕರೆ ಆವರಣ ಮತ್ತು ಸಮುದಾಯ ಭವನದಲ್ಲಿ ಕೃಷಿ ಸಮ್ಮೇಳನ ನಡೆಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಇದೇ ವೇಳೆ ಶಾಸಕ ಡಿ.ಜಿ. ಶಾಂತನಗೌಡ ಅವರನ್ನು ಸರ್ವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: Dental Health: ಸದಾ ಜಗಿಯುತ್ತಿರುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ ಅನ್ನೋದು ನಿಜವೆ?
ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಬಿ. ಮಂಜಪ್ಪ, ಡಿ.ಜಿ. ವಿಶ್ವನಾಥ್, ಎಚ್.ಎ. ಉಮಾಪತಿ, ಎಚ್. ಬಿ. ಶಿವಯೋಗಿ, ರೈತ ಸಂಘದ ಕೆ.ಸಿ. ಬಸಪ್ಪ, ನುಚ್ಚಿನ ವಾಗೀಶ್, ಬಸವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಳದಮ್ಮ ಸಿಂಗಪ್ಪ, ಉಪಾಧ್ಯಕ್ಷೆ ರತ್ನ ರಮೇಶ್, ಸದಸ್ಯರು ಹಾಗೂ ಇತರರು ಇದ್ದರು. ಎಂ.ಸಿ. ದೇವರಾಜ್ ಸ್ವಾಗತಿಸಿದರು. ಬಿ. ಕರಿಬಸಪ್ಪ ನಿರೂಪಿಸಿದರು.