Site icon Vistara News

Challakere News : ಟೊಮೆಟೊ ಬೆಲೆ ಕುಸಿತ; ಹೊಲದಲ್ಲೇ ಕೊಳೆತು ಹೋಗಲಿ ಎಂದು ಬಿಟ್ಟ ರೈತ

#image_title

ಚಳ್ಳಕೆರೆ: ತಾಲೂಕಿನ ಬೆಳಗೆರೆ ಗ್ರಾಮದ (Challakere News) ಕಾವಲು ಕೊಡಜ್ಜರ ತಿಮ್ಮಣ್ಣ ಅವರು, ಒಂದೆರಡು ಬಾರಿ ಈರುಳ್ಳಿ ಬೆಳೆದು ನಷ್ಟವನ್ನು ಅನುಭವಿಸಿದ್ದರು. ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಳ್ಳಲು ಈ ಬಾರಿ ಬೇಸಿಗೆಯಲ್ಲಿ ತಲಾ ಎರಡೆರಡು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯನ್ನು ಉತ್ತಮ ಇಳುವರಿಯಲ್ಲಿ ಬೆಳೆದಿದ್ದರು. ಟೊಮೆಟೊ ಬೆಳೆಯಿಂದ ಹೆಚ್ಚು ಆದಾಯದ ನಿರೀಕ್ಷೆಯಲ್ಲಿ ಇದ್ದ ರೈತರ ಕನಸು ಮಾರುಕಟ್ಟೆಯ ಬೆಲೆ ಕುಸಿತದಿಂದ ಕಮರಿ ಹೋದಂತಾಗಿದೆ. ಇದರಿಂದ ಕಂಗಾಲಾದ ಇಬ್ಬರು ರೈತರು, ತಲಾ ಎರಡೆರಡು ಎಕರೆ ಪ್ರದೇಶದಲ್ಲಿ ಬೆಳೆದ ಟೊಮೆಟೊ ಬೆಳೆಯನ್ನು ಹೊಲದಲ್ಲೆ ಒಣಗಲು ಬಿಟ್ಟಿದ್ದಾರೆ.

ಬೇಸಾಯ, ಗೊಬ್ಬರ, ಟೊಮೆಟೊ ಸಸಿ ಖರೀದಿ ಹಾಗೂ ಕೂಲಿ ಸೇರಿದಂತೆ 2 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಲು ಒಂದು ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಗಿದೆ. ಬೆಳೆ ಉತ್ತಮ ಇಳುವರಿಯಲ್ಲಿ ಬಂದಿತ್ತು. ಆದರೆ ಮಾರುಕಟ್ಟೆಯಲ್ಲಿ ದಿಢೀರನೆ ಬೆಲೆ ಕುಸಿದಿರುವ ಪರಿಣಾಮ ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಾಗಿದೆ.

ಇದನ್ನೂ ಓದಿ: Davanagere South Election Results : ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವು
“ಬೆಳೆದ ಟೊಮೆಟೊ ಪುಕ್ಕಟೆಯಾಗಿ ಕೊಡ್ತೀನಿ ಅಂದರೂ ಯಾರೂ ಬರುವುದಿಲ್ಲ. ರೈತರು ಬೆಳೆದ ಟೊಮೆಟೊ ಹಣ್ಣನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ದಿನವೂ ಬೀಡಾಡಿ ದನಗಳಿಗೆ ಸುರಿಯುತ್ತಿರುತ್ತಾರೆ. ಈ ಸ್ಥಿತಿ ಹೀಗೆ ಮುಂದುವರೆದರೆ ಟೊಮೆಟೊ ಬೆಳೆಗಾರರ ಗೋಳು ಹೇಳತೀರದಾಗುತ್ತದೆ” ಎಂದು ಬೆಳೆಗಾರ ಕೊಡಜ್ಜರ ತಿಮ್ಮಣ್ಣ ಆತಂಕ ವ್ಯಕ್ತಪಡಿಸಿದರು.

“ನಿರಂತರ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಹಾಗೂ ಬೆಲೆ ಕುಸಿತದ ತೊಂದರೆಯನ್ನು ತಪ್ಪಿಸಲು ಈ ಭಾಗದಲ್ಲಿ ಟೊಮೆಟೊ ಸಂಸ್ಕರಣ ಘಟಕ ಸ್ಥಾಪಿಸಬೇಕು. ಬೆಳೆ ನಷ್ಟಕ್ಕೆ ಸಿಲುಕಿರುವ ಬೆಳೆಗಾರರಿಗೆ ಕೂಡಲೆ ಬೆಳೆ ಪರಿಹಾರ ನೀಡಬೇಕು” ಎಂದು ರೈತ ಬಿ.ಎಸ್.ನಿಜಲಿಂಗಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ: Davanagere News : ಚಳ್ಳಕೆರೆ ಶಾಸಕ ಟಿ. ರಘುಮೂರ್ತಿಗೆ ಮಂತ್ರಿ ಸ್ಥಾನ ನೀಡುವಂತೆ ರೈತ ಸಂಘದಿಂದ ಒತ್ತಾಯ

“ಈಗಾಗಲೇ ತಾಲೂಕಿನಾದ್ಯಂತ ಬೆಳೆಯಲಾದ ಈರುಳ್ಳಿ ಹಾಗೂ ಟೊಮೆಟೊ ಬೆಳೆ ಬೆಲೆ ಕುಸಿತದಿಂದ ರೈತರ ಸಂಕಷ್ಟ ಎದರಿಸುತ್ತಿದ್ದಾರೆ. ಇತಂಹ ರೈತರಿಗೆ ಸರ್ಕಾರ ಪರಿಹರ ನೀಡಬೇಕಿದೆ” ಎಂದು ರೈತ ಮುಖಂಡ ಚಿಕ್ಕಣ ಆಗ್ರಹಿಸಿದ್ದಾರೆ.


“ತಾಲೂಕಿನಲ್ಲಿ ಒಟ್ಟು 700 ಹೆಕ್ಟೆರ್ ಪ್ರದೇಶದಲ್ಲಿ ಟೊಮೆಟೊ ಬೆಳೆ ಬೆಳೆಯಲಾಗಿದೆ. ಈರುಳ್ಳಿ ಮತ್ತು ಟೊಮೆಟೊ ಬೆಳೆ ರೈತರಿಗೆ ಲಾಟರಿ ಇದ್ದ ಹಾಗೆ. ಯಾವ ಬೆಳೆಯಿಂದ ಎಷ್ಟು ಲಾಭ ಸಿಗುತ್ತದೆ, ಎಷ್ಟು ನಷ್ಟ ಆಗುತ್ತದೆ ಹೇಳಲು ಆಗುವುದಿಲ್ಲ. ಹಾಗಾಗಿ ಬರೀ ಒಂದೆರಡು ಬೆಳೆ ಬೆಳೆಯುವ ಬದಲು ರೈತರು, ನೀರಾವರಿ ಪ್ರದೇಶದಲ್ಲಿ ಮಿಶ್ರ ಬೆಳೆ ಬೆಳೆಯುವುದು ಸೂಕ್ತ” ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಸಲಹೆ ನೀಡಿದರು.

Exit mobile version