Site icon Vistara News

Karnataka Election 2023: ಹೊನ್ನಾಳಿಯಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟು ಕಮಲ ಹಿಡಿದ ಮುಖಂಡರು

#image_title

ಹೊನ್ನಾಳಿ : ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಬೆನ್ನಲ್ಲೆ ಎಲ್ಲೆಡೆ ಪಕ್ಷಾಂತರವೂ ಹೆಚ್ಚಾಗಿದೆ. ಅದೇ ರೀತಿಯಲ್ಲಿ ಹೊನ್ನಾಳಿಯಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಸೋಮವಾರ ಪಕ್ಷ ತೊರೆದಿದ್ದು, ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಶಾಸಕ ರೇಣುಕಾಚಾರ್ಯ ಅವರು ಅವರನ್ನೆಲ್ಲ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ.

ಬಿಜೆಪಿ ಸೇರಿದ ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ರೇಣುಕಾಚಾರ್ಯ ಅವರು, “ಚುನಾವಣೆಯಲ್ಲಿ ಗೆದ್ದ ಶಾಸಕರು ಸ್ಥಳೀಯ ಜನಪ್ರತಿನಿಧಿಗಳನ್ನು ತಾಲೂಕಿನ ಜನತೆಯನ್ನು ವಿಶ್ವಾಸದಿಂದ ಕಾಣುವುದು ಅವರ ಜವಾಬ್ದಾರಿಯಾಗಿರುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ “ತಾಲೂಕಿನಲ್ಲಿ ನನಗೆ ಶಕ್ತಿ ನೀಡುವ ಕೆಲಸವನ್ನು ಕ್ಷೇತ್ರದ ಮತದಾರರು ಮಾಡಿದರೆ, ತಾಲೂಕಿನ ಎಲ್ಲ ಜನತೆಯ ಧ್ವನಿಯಾಗಿ ಕೆಲಸ ಮಾಡುತ್ತೇನೆ.” ಎಂದೂ ಹೇಳಿದರು.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಪ್ರಮುಖರು ಮಾತನಾಡಿ, “ಕಾಂಗ್ರೆಸ್‌ನಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಗೌರವ ಮತ್ತು ಬೆಲೆ ಇಲ್ಲದಂತಾಗಿದೆ. ಎಲ್ಲ ಪಕ್ಷದವರನ್ನು ವಿಶ್ವಾಸದಿಂದ ಕಾಣುವ ಗುಣ ರೇಣುಕಾಚಾರ್ಯರಲ್ಲಿದೆ ಎಂದು ನಾವು ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದೇವೆ” ಎಂದರು.

ಷಣ್ಮುಖ ಕುಂದೂರು, ಅನಿಲ್ ಕುಂದೂರು, ಶೇಖರಪ್ಪ ಕುಂದೂರು, ಉದಯ್ ಕುಂದೂರು, ಮರೀಗೌಡ, ಬಸವರಾಜ್ ಬೀರಗೊಂಡನಹಳ್ಳಿ, ಹಾಲೇಶಪ್ಪ ಕೂಲಂಬಿ, ಸಿದ್ದೇಶ್ ಕೂಲಂಬಿ, ಆಂಜನೇಯ ಕೂಲಂಬಿ, ಮಂಜಣ್ಣ ಕೂಲಂಬಿ, ಬಸವರಾಜಪ್ಪ ಕೂಲಂಬಿ, ಕರಿಬಸಪ್ಪ ಕೂಲಂಬಿ, ಅವಿನಾಶ್ ಕೂಲಂಬಿ, ರಮೇಶ್ ನಾಯ್ಕ್ ಗಂಟ್ಯಾಪುರ, ಹಾಲೇಶ್ ಪಾಟೀಲ್ ಹೊಸಹಳ್ಳಿ ಸೇರಿ ಒಟ್ಟು 35ಕ್ಕೂ ಹೆಚ್ಚು ಪ್ರಮುಖ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾದರು.

ಇದನ್ನೂ ಓದಿ: Ram Navami 2023: ಹೊಸನಗರ, ಚೆನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಾಮನವಮಿ; ರಾಮನ ಹೆಸರೇ ಸ್ಫೂರ್ತಿ ಎಂದರು ರಾಘವೇಶ್ವರ ಶ್ರೀ

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಕಾರ್ಯಕರ್ತರಿಗೆ ಅಭಿನಂದಿಸಿ ಗೌರವಿಸಿದ ಎಂ.ಪಿ. ರೇಣುಕಾಚಾರ್ಯ ನೀವೆಲ್ಲ ಪಕ್ಷ ಸೇರ್ಪಡೆಯಾಗಿರುವುದು ನನಗೆ ಬಲ ತುಂಬಿದಂತೆ ಆಗಿದೆ ಎಂದು ಹೇಳಿದರು.

Exit mobile version