Site icon Vistara News

Crematorium Problem : ಹಸುಗೂಸು ಸೇರಿ ಒಂದೇ ದಿನ 8 ಮಂದಿ ಸಾವು; ಅಂತ್ಯಕ್ರಿಯೆಗಿಲ್ಲ ಸ್ಮಶಾನ!

Crematorium Problem

ದಾವಣಗೆರೆ: ರಾಜ್ಯದ ನಾನಾ ಭಾಗಗಳಲ್ಲಿ ಇತ್ತೀಚೆಗೆ ಕಂಡುಬರುವ ಅತಿ ದೊಡ್ಡ ಸಮಸ್ಯೆ ಎಂದರೆ ಸ್ಮಶಾನದ್ದು (Crematorium Problem). ಸಾರ್ವಜನಿಕ ರುದ್ರಭೂಮಿ ಇಲ್ಲದೆ, ಅಥವಾ ನಿಗದಿತ ರುದ್ರಭೂಮಿಗೆ ಕಾನೂನು ತಕರಾರುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಲವಾರು ಬಾರಿ ಜನರು ಕಳೇಬರವನ್ನು (Dead Body) ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಘಟನೆಗಳು ನಡೆದಿದೆ. ಇದೀಗ ದಾವಣಗೆರೆಯ ಹೊಸ ಕುಂದುವಾಡದಲ್ಲಿ ಒಬ್ಬರಲ್ಲ ಇಬ್ಬರಲ್ಲ ಒಂದೇ ದಿನ ಬರೋಬ್ಬರಿ 8 ಮಂದಿಯ ಸಾವಾಗಿದ್ದು, ಅಂತ್ಯಕ್ರಿಯೆ ಮಾಡಲು ಸ್ಮಶಾನವಿಲ್ಲದೇ ಗ್ರಾಮಸ್ಥರು ಪರದಾಡಿದರು.

ಸುಮಾರು 8 ಸಾವಿರ ಜನಸಂಖ್ಯೆ ಹೊಂದಿರುವ ಹೊಸ ಕುಂದುವಾಡ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸ್ಮಶಾನಕ್ಕಗಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಗ್ರಾಮಸ್ಥರು ಈ ಮೊದಲು ಹಳೆ ಕುಂದವಾಡ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಇಂದು ಒಂದೇ ದಿನ ಎಂಟು ಮಂದಿ ಸಾವನ್ನಪ್ಪಿದ್ದು, ಅಂತ್ಯ ಸಂಸ್ಕಾರ ಮಾಡುವುದಕ್ಕೆ ಜಾಗವಿರದೆ, ಮನೆ ಬಳಿಯೇ ಮೃತದೇಹವನ್ನು ಇಟ್ಟುಕೊಳ್ಳುವಂತಾಯಿತು. ಇದರಿಂದ ರೊಚ್ಚಿ ಗೆದ್ದ ಗ್ರಾಮಸ್ಥರು ಪ್ರತಿಭಟಿಸಿ, ಅಧಿಕಾರಿಗಳು ಸ್ಥಳಕ್ಕೆ ಧಾವಿಸುವಂತೆ ಪಟ್ಟು ಹಿಡಿದರು.

ಇದನ್ನೂ ಓದಿ: Murugha mutt : ಮುರುಘಾ ಮಠದಲ್ಲಿ ಕಳ್ಳತನ; ದರ್ಬಾರ್‌ ಹಾಲ್‌ನಲ್ಲಿದ್ದ 22 ಕೆಜಿ ತೂಕದ ಬೆಳ್ಳಿ ಮೂರ್ತಿ ಎಗರಿಸಿದ ಕಳ್ಳರು

ಹಸುಗೂಸಿನ ಶವ ಹಿಡಿದು ಉಳಲು ಜಾಗ ಹುಡುಕಾಟ

ಹೊಸ ಕುಂದುವಾಡದಲ್ಲಿ ಮೂರು ದಿನ ಹಸುಗೂಸು ಸೇರಿದಂತೆ 7 ಮಂದಿ ನಾನಾ ಕಾರಣಕ್ಕೆ ಮೃತಪಟ್ಟಿದ್ದಾರೆ. ಮಾರಮ್ಮ (70), ಈರಮ್ಮ (55), ಭೀಮಜ್ಜಿ (80), ಶಾಂತಮ್ಮ (72) ಹಾಗೂ ಸುನೀಲ್ (32), ಸಂತೋಷ (32) ಸೇರಿ ಮೂರು ದಿನದ ಹಸುಗೂಸು ಮೃತಪಟ್ಟಿದೆ.

ಇನ್ನೂ ಸ್ಮಶಾನಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಣಗೆರೆ ತಾಲೂಕಿನ ತಹಶೀಲ್ದಾರ್ ಸಿ ಅಶ್ವಥ್ ಧಾವಿಸಿದರು. ಬಳಿಕ ಪ್ರತಿಕ್ರಿಯಿಸಿದ ಅವರು ಕುಂದುವಾಡ ಗ್ರಾಮಕ್ಕೆ ಈಗಾಗಲೇ 3 ಎಕರೆ ಸ್ಮಶಾನ ಇದೆ. ಗ್ರಾಮಸ್ಥರು ಹೆಚ್ಚುವರಿ ಸ್ಮಶಾನ ಜಾಗಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಅದು ಇನ್ನೊಂದು ಇಲಾಖೆಯ ಅನುಮತಿ ಬೇಕಾಗಿರುವುದರಿಂದ ಪ್ರಕ್ರಿಯೆ ನಡೆಯುತ್ತಿದೆ.

ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅಂತ್ಯ ಸಂಸ್ಕಾರಕ್ಕೆ ಯಾರಾದರೂ ಅಡ್ಡಿ ಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. ಈಗಿರುವ ಸ್ಮಶಾನದಲ್ಲೇ ಅಂತ್ಯ ಸಂಸ್ಕಾರ ಮಾಡಲಿಕ್ಕೆ ವ್ಯವಸ್ಥೆ ಮಾಡಲಾಗುವುದು. ಹೆಚ್ಚುವರಿ ಸ್ಮಶಾನ ಜಾಗಕ್ಕಾಗಿ ಪ್ರಕ್ರಿಯೆ ನಡೆಯುತ್ತಿದೆ. ಏಳು ಜನರ ಅಂತ್ಯ ಸಂಸ್ಕಾರ ಕುರಿತು ಗ್ರಾಮಸ್ಥರೊಟ್ಟಿಗೆ ಚರ್ಚೆ ಮಾಡಲಾಗುತ್ತದೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version