Site icon Vistara News

Davanagere News : ಪ್ರತಿ ತಾಲೂಕಿಗೆ ಬೇಕು ಈಜುಕೊಳ: ರೈತ ಮುಖಂಡ ಭೂತಲಿಂಗಪ್ಪ ಮನವಿ

#image_title

ಚಳ್ಳಕೆರೆ: ಬಯಲುಸೀಮೆ ಚಳ್ಳಕೆರೆ ತಾಲೂಕು (Davanagere News) ಬರದ ನಾಡು ಬಿಸಿಲಿನ ಬೀಡು ಎಂಬ ಬಿರುದು ಪಡೆದಿದ್ದು, ಈ ವರ್ಷ ಬಿಸಿಲಿನ ಧಗೆ ಹೆಚ್ಚಾಗಿದೆ. ಅದನ್ನು ತಾಳಲಾರದೆ ಗ್ರಾಮೀಣ ಪ್ರದೇಶದ ಜನರು ಹೊಲಗಳಲ್ಲಿ ನಿರ್ಮಿಸಿಕೊಂಡ ನೀರು ಶೇಖರಣ ತೊಟ್ಟಿಗಳಲ್ಲಿ ತಮ್ಮ ಮಕ್ಕಳ ಹಾಗೂ ಸಂಬಂಧಿಕರ ಜೊತೆಗೂಡಿ ಈಜಾಡುತ್ತಿದ್ದಾರೆ.

ಇದನ್ನೂ ಓದಿ: Rain News: ಶಿವಮೊಗ್ಗದಲ್ಲಿ ಸಿಡಿಲು ಬಡಿದು ಮಹಿಳೆ ಸಾವು
ಗ್ರಾಮಗಳಲ್ಲಿ ಪುಟ್ಟ ಮಕ್ಕಳು ಅತ್ಯಂತ ಸಂತೋಷದಿಂದ ನೀರಿಗೆ ಜಿಗಿದು ಸಂಭ್ರಮ ಪಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ದ್ಯಾವರನ ಹಳ್ಳಿಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ರೈತ ಭೂತಲಿಂಗಪ್ಪ, “ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲೇ ಪ್ರಪಂಚ ಎಂಬಂತಾಗಿದೆ. ಅವುಗಳಿಂದ ಮಕ್ಕಳನ್ನು ಹೊರತಂದು ತಾವು ಜೊತೆಗೂಡಿ ಈಜು ಕಲಿಸುವುದರಿಂದ ಮಕ್ಕಳ ಮನಸ್ಸಿನಲ್ಲಿರುವ ಭಯ, ಆತಂಕಗಳು ದೂರವಾಗಿ ಎಂತಹ ಕಠಿಣ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯ ಮೂಡುತ್ತದೆ” ಎಂದರು.


ಹಾಗೆಯೇ, “ಸರ್ಕಾರವು ಪ್ರತಿ ತಾಲೂಕಿಗೆ ಒಂದರಂತೆ, ಈಜುಕೊಳವನ್ನು ನಿರ್ಮಿಸಿ ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭೆಗಳನ್ನು ಗುರುತಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳಿಗೆ ಆಸಕ್ತಿ ಮೂಡುವಂತೆ ಮಾಡಬೇಕು. ಗ್ರಾಮೀಣ ಮಕ್ಕಳನ್ನು ಒಲಂಪಿಕ್ ಪಂದ್ಯಗಳಲ್ಲಿ ಪದಕಗಳನ್ನು ತರುವ ಪ್ರತಿಭೆಗಳನ್ನಾಗಿ ಮಾಡುವ ಚಿಂತನೆ ನಡೆಸಬೇಕು” ಎಂದು ಮನವಿ ಮಾಡಿದರು.

“ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಾವಿಗಳು ಇಲ್ಲದಂತಾಗಿದ್ದು, ಈಜು ಕಲಿಯುವವರ ಸಂಖ್ಯೆ ವಿರಳವಾಗಿದೆ. ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿರುವುದರಿಂದ ಚೆಕ್ ಡ್ಯಾಮ್‌ಗಳು ತುಂಬಿ ಹರಿಯುತ್ತಿದೆ. ಅಲ್ಲಲ್ಲಿ ಇಂತಹ ಈಜು ಕ್ರೀಡೆಗಳನ್ನು ಆಡುವುದನ್ನು ಕಾಣಬಹುದಾಗಿದೆ. ಆದರೆ ಇತ್ತೀಚಿನ ಯುವಕರಲ್ಲಿ ನೀರು ಕಂಡರೆ ಭಯ ಇರುವುದರಿಂದ ಹಾಗೂ ಮಾನಸಿಕವಾಗಿ ಸದೃಢತೆ ಸಾಧಿಸದೆ ಇರುವುದರಿಂದ ಈಜು ಕಲಿಯಲು ಮುಂದಾಗುತ್ತಿಲ್ಲ. ಮಕ್ಕಳನ್ನು ಫೋಷಕರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಬೆಳೆಸದೆ ನಾಲ್ಕು ಜನರ ಮಧ್ಯೆ ಬೆಳೆಸಿದಾಗ ಅವರ ಆಲೋಚನೆಗಳು ಆಸಕ್ತಿಗಳು ಬದಲಾಗುತ್ತವೆ. ಪೋಷಕರು ಮಕ್ಕಳ ಚಲನವಲನಗಳ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದು ತಪ್ಪಲ್ಲ ಆದರೆ ಹೊರಗಿನ ಸಮಾಜದ ಅರಿವಿಲ್ಲದಂತೆ ಬೆಳೆಸುವುದು ತಪ್ಪು” ಎಂದು ಹೇಳಿದರು.

Exit mobile version