ನ್ಯಾಮತಿ: “ಕನ್ನಡ ನಾಡಿನಲ್ಲಿ ವಾಸವಿರುವ ಪ್ರತಿಯೊಬ್ಬರ ಮನಸ್ಸಿನಲ್ಲಿ ಕನ್ನಡದ ಬಗ್ಗೆ ತುಡಿತ ಇರಬೇಕು” ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಂದನಾ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಬಗ್ಗೆ ಪ್ರತಿಯೊಬ್ಬರಿಗೂ ಗೌರವ ಇರಬೇಕು ಎಂದು ಹೇಳಿದರು.
ಕನ್ನಡ ನಾಡು ನುಡಿ ಹಿತಚಿಂತಕ ಆರುಂಡಿ ಕೋಟೆ ಕರೆಗೌಡ ನಾಗರಾಜಪ್ಪ ಅವರು ಕನ್ನಡ ಅಸ್ಮಿತೆ- ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಬಗ್ಗೆ ಹಾಗೂ ಸಂಸ್ಥೆ ಪ್ರಸ್ತುತ ಜನಸಾಮಾನ್ಯರ ಪರಿಷತ್ತು ಆಗಿರುವ ಬಗ್ಗೆ ಕುರಿತು ವಿವರಿಸಿದರು.
ಇದನ್ನೂ ಓದಿ: Karnataka Election 2023: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೊರೆದ 500ಕ್ಕೂ ಹೆಚ್ಚು ಜನ; ಕೆಜಿಎಫ್ ಬಾಬುಗೆ ಬೆಂಬಲ
ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಅಂಬಿಕಾ ಬಿದರಗೆಡ್ಡೆ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂವಿ ಶಿವಯೋಗಿ, ನಿಕಟಪೂರ್ವ ಅಧ್ಯಕ್ಷ ಜಿ ನಿಜಲಿಂಗಪ್ಪ, ಸದಸ್ಯರಾದ ಜಿ.ಕೆ. ಭೋಜರಾಜ್, ಸೈಶಾದ್ ಅಪ್ಸರ ಭಾಷಾ, ರೇವಣಸಿದ್ದಪ್ಪ ಮಾತನಾಡಿದರು.
ಕಸಾಪ ಅಧ್ಯಕ್ಷ ಡಿ.ಎಂ. ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಆಜೀವ ಸದಸ್ಯರು ವಾಲ್ಮೀಕಿ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು. ಕೋಶಾಧ್ಯಕ್ಷ ಕೆ.ಎಂ. ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಎಸ್.ಜಿ. ಬಸವರಾಜಪ್ಪ ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ನಿರೂಪಿಸಿದರು. ಬೆಳಗತ್ತಿ ಹೋಬಳಿ ಕಸಾಪ ಅಧ್ಯಕ್ಷ ಎಂ.ಜಿ. ಕವಿರಾಜ್ ವಂದಿಸಿದರು.