ಹೊನ್ನಾಳಿ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಹಬ್ಬಗಳ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಮಡಿವಾಳ ಮಾಚಿದೇವ ಜಯಂತಿ (Madivala Machideva Jayanti) ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಉಪ ವಿಭಾಗಾಧಿಕಾರಿ ತಿಮ್ಮಣ್ಣ ಹೊಲ್ಮನಿ, ತಹಸೀಲ್ದಾರ್ ಪಟ್ಟರಾಜ್ ಗೌಡ ಅವರು ಚಾಲನೆ ನೀಡಿದರು.
ಇದನ್ನೂ ಓದಿ: The Bharat Ratna : ಭಾರತ ರತ್ನ ಪುರಸ್ಕಾರದ ಇತಿಹಾಸ ಸೇರಿದಂತೆ ವಿಶೇಷ ಮಾಹಿತಿಗಳು ಇಲ್ಲಿವೆ
ಸಮಾಜದ ಮುಖಂಡ ಗಣೇಶ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಹೊನ್ನಾಳಿ ತಾಲೂಕು ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಎಂ.ಆರ್. ಮಾಂತೇಶ್ ಮಾತನಾಡಿದರು.
ಇದನ್ನೂ ಓದಿ: IND vs ENG 2nd Test: ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ ಬರೆದ ದಾಖಲೆಗಳ ಪಟ್ಟಿ ಹೀಗಿದೆ
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಸುರೇಶ ನಾಯಕ್, ಅಶೋಕ್ ನಾಯಕ್, ಮಡಿವಾಳ ಮಾಚಿದೇವ ಸಂಘದ ಹೊನ್ನಾಳಿ ತಾಲೂಕು ಘಟಕದ ಪದಾಧಿಕಾರಿಗಳಾದ ಮಂಜು, ವೆಂಕಟೇಶ್, ದೇವರಾಜ್ ಹಾಗೂ ಮುಖಂಡರಾದ ಲೋಕೇಶಪ್ಪ, ಸುರೇಶ್, ಶಾಂತಮ್ಮ, ರಮೇಶ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಇತರರು ಪಾಲ್ಗೊಂಡಿದ್ದರು.