Site icon Vistara News

Davanagere News: ಹೊನ್ನಾಳಿಯಲ್ಲಿ ನೆರೆಹಾವಳಿ ರಕ್ಷಣೆ ಬಗ್ಗೆ ಎಸ್‌ಡಿಆರ್‌ಎಫ್ ತಂಡದಿಂದ ಅಣಕು ಪ್ರದರ್ಶನ

Mock demonstration by SDRF team on flood protection in Honnali

ಹೊನ್ನಾಳಿ: ನೆರೆಹಾವಳಿ ಹಾಗೂ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಪ್ರವಾಹದಲ್ಲಿ ಸಿಲುಕಿದ ಅಸಹಾಯಕರನ್ನು ಹೇಗೆ ರಕ್ಷಣೆ ಮಾಡಿ ಅವರ ಜೀವವನ್ನು ರಕ್ಷಿಸಬೇಕೆಂಬುದರ ಕುರಿತು ಸಾರ್ವಜನಿಕರ ಸಮ್ಮುಖ ಎಸ್.ಡಿ.ಆರ್.ಎಫ್. ತಂಡದವರು, 2 ಗಂಟೆಗಳ ಕಾಲ ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಸುರೇಶ್‌ ಬಿ. ಇಟ್ನಾಳ್ ಸಮ್ಮುಖದಲ್ಲಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿಯ ತುಂಗಭದ್ರ ನದಿಯಲ್ಲಿ ಮಂಗಳವಾರ (Davanagere News) ಅಣಕು ಪ್ರದರ್ಶನ ಮಾಡಿದರು.

ವಿಪತ್ತಿನ ಸಂದರ್ಭದಲ್ಲಿ ನದಿ ನೀರು ಉಕ್ಕಿ ಪ್ರವಾಹದಲ್ಲಿ ಸಿಲುಕಿದಾಗ ಅವರನ್ನು ಹೇಗೆ ರಕ್ಷಣೆ ಮಾಡಬೇಕೆಂದು ದಾವಣಗೆರೆ ಎಸ್.ಡಿ.ಆರ್.ಎಫ್. ತಂಡ ರಕ್ಷಣಾ ಪರಿಕರಣಗಳ ಪೂರ್ವ ತಯಾರಿ ಮಾಡಿಕೊಂಡು ನದಿಯಲ್ಲಿ ಬೋಟ್ ಹಾಗೂ ಈಜುವ ಮೂಲಕ ಪ್ರದರ್ಶನ ಮಾಡಿ ತೋರಿಸಿದರು.

ಇದನ್ನೂ ಓದಿ: Assembly Session 2024: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್‌ ನ್ಯೂಸ್‌; ಶೀಘ್ರವೇ ಗೌರವಧನ ಹೆಚ್ಚಳ!

ಪ್ರಕೃತಿ ವಿಕೋಪವನ್ನು ತಡೆಯಲು ಅಸಾಧ್ಯವಾದರೂ ಅವುಗಳ ಬಗ್ಗೆ ಅರಿವು ಇದ್ದರೆ ಜೀವ ಹಾಗೂ ಆಸ್ತಿಯ ಹಾನಿಯನ್ನು ತಡೆಯಬಹುದು, ಇದಕ್ಕೆ ವಿವಿಧ ಇಲಾಖೆಗಳು ಇದ್ದರೂ ಸಾರ್ವಜನಿಕರು ಕೈಜೋಡಿಸದಿದ್ದರೆ ವಿಪತ್ತು ತಪ್ಪಿಸಲು ಅಸಾಧ್ಯ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ತಿಳಿಸಿದರು.

ಇದನ್ನೂ ಓದಿ: Assembly Session 2024: ಕಾಲುವೆಗಳ ಕೊನೇ ಭಾಗದ ರೈತರಿಗೆ ನೀರು ಖಾತರಿ; ನೀರಾವರಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

ಈ ಸಂದರ್ಭದಲ್ಲಿ ಎಸ್‌ಡಿಆರ್‌ಎಫ್‌ನ ಡೆಪ್ಯೂಟಿ ಕಮಾಂಡೆಂಟ್‌ ಹೇಮಕುಮಾರ್, ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್. ಹೊನ್ನಾಳಿ ತಹಸೀಲ್ದಾರ್ ಪುಟ್ಟರಾಜ ಗೌಡ,. ತಾ.ಪಂ. ಇಒ ರಾಘವೇಂದ್ರ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಜಗಳೂರು ತಹಸೀಲ್ದಾರ್ ಫಿರೋಜ್ ಷಾ, ಪುರಸಭೆ ಮುಖ್ಯ ಅಧಿಕಾರಿ ಲೀಲಾವತಿ, ಎಎಸ್‌ಐ ತಿಪ್ಪೇಸ್ವಾಮಿ, ಗ್ರೇಡ್ 2 ತಹಸೀಲ್ದಾರ್ ಸುರೇಶ್, ಅಗ್ನಿಶಾಮಕ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version