ಹೊನ್ನಾಳಿ: ಪಟ್ಟಣದ ಪ್ರಸಿದ್ಧ ಹಿರೇಕಲ್ ಮಠದಲ್ಲಿ ಶ್ರಾವಣ ಮಾಸದ (Shravan Month) ಅಂಗವಾಗಿ ಕಳೆದ ಭಾನುವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು (Religious Programs) ಜರುಗಿದವು.
ಮಠದಲ್ಲಿ ಭಾನುವಾರ ವಟುಗಳಿಗೆ ಶಿವ ದೀಕ್ಷೆ ಕಾರ್ಯಕ್ರಮ ನಡೆಯಿತು, ಸೋಮವಾರ ಶ್ರೀಮಠದ ಆವರಣದಲ್ಲಿರುವ ಕತೃ ಗದ್ದುಗೆಗಳಿಗೆ ಪೂಜೆ ನೆರವೇರಿತು. ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಚನ್ನಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಶ್ರೀ ಚನ್ನಪ್ಪ ಸ್ವಾಮಿ ರಥೋತ್ಸವವು ಪಟ್ಟಣದ ಹಿರೇಕಲ್ ಮಠದ ವೃತ್ತದಿಂದ ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಹಸ್ರಾರು ಭಕ್ತಾಧಿಗಳ ನಡುವೆ ವಿಜೃಂಭಣೆಯಿಂದ ರಥೋತ್ಸವ ನಡೆಯಿತು.
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದು 10 ಸಾವಿರ ರನ್ ಎಲೈಟ್ ಪಟ್ಟಿ ಸೇರಿದ ರೋಹಿತ್ ಶರ್ಮ
ಮಧ್ಯ ಕರ್ನಾಟಕದ ಭಕ್ತರಿಗೆ ಅತೀ ದೊಡ್ಡ ರಥೋತ್ಸವ ಇದಾಗಿದೆ, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ರಥೋತ್ಸವಕ್ಕೆ ಆಗಮಿಸಿ, ಚೆನ್ನಪ್ಪ ಸ್ವಾಮಿಯ ದರ್ಶನ ಪಡೆದರು.
ಕಳೆದ ಮೂರು ವರ್ಷಗಳಿಂದ ಮಠಕ್ಕೆ ಬರುತ್ತಿರುವ ನೂರಾರು ಭಕ್ತರಿಗೆ ನಿರಂತರವಾಗಿ ಅನ್ನ ಸಂತರ್ಪಣೆ ನಡೆಯುತ್ತದೆ. ವಿಶೇಷವಾಗಿ ರಥೋತ್ಸವದ ದಿನವಾದ ಮಂಗಳವಾರ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ‘ಭಾರತದಿಂದ ಉತ್ತಮ ಉಡುಗೊರೆ ಸಿಕ್ಕಿದೆ’; ಕಳಪೆ ಪ್ರದರ್ಶನಕ್ಕೆ ಪಾಕ್ ಕೋಚ್ ಅಸಮಾಧಾನ
ಜಗಮಗಿಸುತ್ತಿರುವ ದೀಪ ಅಲಂಕಾರ
ಶ್ರೀ ಚನ್ನಪ್ಪ ಸ್ವಾಮಿ ರಥೋತ್ಸವದ ಅಂಗವಾಗಿ ಹಿರೇಕಲ್ ಮಠದ ಆವರಣ ಹಾಗೂ ಎಲ್ಲಾ ದೇವಸ್ಥಾನಗಳ ಮೇಲ್ಭಾಗದಲ್ಲಿ ದೀಪಾಲಂಕಾರದಿಂದ ಸಿಂಗಾರಗೊಳಿಸಲಾಗಿತ್ತು.