Site icon Vistara News

Davanagere News: ಹೊನ್ನಾಳಿಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

Davanagere News Teachers Day programme at Honnali

ಹೊನ್ನಾಳಿ: ತಾಲೂಕಿನ ಹಿರೇಕಲ್ ಮಠದ ಸಮುದಾಯ ಭವನದಲ್ಲಿ ಮಂಗಳವಾರ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ (Teachers Day) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಶಾಸಕ ಡಿ.ಜೆ. ಶಾಂತನಗೌಡ ಉದ್ಘಾಟಿಸಿದರು, ಬಳಿಕ ಮಾತನಾಡಿ, ಭವಿಷ್ಯದ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ತಿಳಿಸಿದರು.

ಪ್ರತಿ ಶಿಕ್ಷಕರು ಮಾಜಿ ಶಿಕ್ಷಣ ಸಚಿವ ಹಾಗೂ ಗಾಂಧಿವಾದಿ ಗೋವಿಂದೇಗೌಡರನ್ನು ಸ್ಮರಣೆ ಮಾಡಿಕೊಳ್ಳಬೇಕು ಎಂದ ಅವರು, ಅವರ ಅಧಿಕಾರದಲ್ಲಿ ಅವಧಿಯಲ್ಲಿ ಬರೋಬ್ಬರಿ 1.10 ಲಕ್ಷ ಶಿಕ್ಷಕರನ್ನು ನೇಮಕ ಮಾಡಿಕೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ, ಅದರಲ್ಲಿ ಶೇಕಡ 50ರಷ್ಟು ಮಹಿಳೆಯರಿಗೂ ಉದ್ಯೋಗ ನೀಡಿದ್ದು ವಿಶೇಷ ಎಂದರು.

ಇದನ್ನೂ ಓದಿ: Teachers Day: ಶಿಕ್ಷಕ ನಾರಾಯಣ ಭಾಗ್ವತ್‌ಗೆ ರಾಷ್ಟ್ರಮಟ್ಟದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ

ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿಯನ್ನೇ ಮುಂದುವರಿಸುವುದರ ನಿಮ್ಮ ಮನವಿಯ ಬಗ್ಗೆ ನಾನು ಸಹ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದೇನೆ ಅವರು ಸಹ ಸಕರಾತ್ಮಕವಾಗಿ ಸ್ಪಂದಿಸಿ ಮುಂದಿನ ವರ್ಷ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಮಾತನಾಡಿ, ಮನುಷ್ಯನನ್ನು ನಾಗರಿಕರನ್ನಾಗಿ, ಸಮಾಜದ ಆಸ್ತಿಯನ್ನಾಗಿ ರೂಪಿಸುವವರು ಶಿಕ್ಷಕರು ಇಂತಹ ಶಿಕ್ಷಕರಿಗೆ ಪ್ರತಿಯೊಬ್ಬರೂ ಗೌರವಿಸಬೇಕಾಗಿದೆ ಎಂದು ತಿಳಿಸಿದರು.

ಶಿಕ್ಷಕರ ಮೇಲೆ ಭರವಸೆ ಇಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಾರೆ, ಆ ಮಕ್ಕಳಿಗೆ ತಾವು ಮೌಲ್ಯಾಧಾರಿತ ಶಿಕ್ಷಣ ನೀಡಿ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಧನಂಜಯ ಉಪನ್ಯಾಸ ನೀಡಿದರು. ಹಿರೇಕಲ್ ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಇದನ್ನೂ ಓದಿ: Weather report : ಬೆಂಗಳೂರು ಗಡ ಗಡ ; ಉತ್ತರ ಕರ್ನಾಟಕ ಮಳೆಯಿಂದ ತತ್ತರ!

ಈ ವೇಳೆ ನ್ಯಾಮತಿ ತಹಸೀಲ್ದಾರ್ ಆರ್. ವಿ. ಕಟ್ಟಿ, ಬಿಇಒ ನಂಜರಾಜ್, ಬಿಆರ್‌ಸಿ ತಿಪ್ಪೇಶಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರುದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಆರ್. ಪಾಟೀಲ್, ಶಿಕ್ಷಕರ ಸಂಘದ ಅಧ್ಯಕ್ಷ ನೀಲಮ್ಮ, ತಾಲೂಕು ದೈಹಿಕ ಶಿಕ್ಷಕ ಕೆ ಎಸ್ ಈಶ್ವರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಅರುಣ್ ಕುಮಾರ್, ಶಿಕ್ಷಕಿಯರಾದ ಸೌಮ್ಯಶ್ರೀ, ರಂಜಿತಾ ಹಾಗೂ ಇತರರು ಇದ್ದರು.

Exit mobile version