ನ್ಯಾಮತಿ: ಲೋಕಸಭೆ ಸಾರ್ವತ್ರಿಕ ಚುನಾವಣೆ (Lok Sabha Election) ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧೀಕೃತವಾಗಿ ಸಾಗಿಸಲಾಗುತ್ತಿದ್ದ 1.63 ಲಕ್ಷ ರೂ ನಗದು ಹಣ ಮತ್ತು 2.70. ಲಕ್ಷ ರೂ ಬೆಲೆಬಾಳುವ 56.360 ಗ್ರಾಂ ಚಿನ್ನದ ಆಭರಣಗಳನ್ನು ನ್ಯಾಮತಿ ತಾಲೂಕು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಪಿಐ ರವಿ ಎನ್.ಎಸ್. (Davanagere News) ತಿಳಿಸಿದ್ದಾರೆ.
ಕಾರಿನಲ್ಲಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ವೇಳೆ 1.63 ಲಕ್ಷ ರೂ ನಗದು ಹಣ ಮತ್ತು 2.70 ಲಕ್ಷ ರೂ ಬೆಲೆಬಾಳುವ 56.360 ಗ್ರಾಂ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: Exit Polls: ಏ.19ರಿಂದ ಚುನಾವಣೋತ್ತರ ಸಮೀಕ್ಷೆಗಳಿಗೆ ಕಡಿವಾಣ ಹಾಕಿದ ಆಯೋಗ
ಚಿನ್ನದ ಆಭರಣಗಳು ಹಾಗೂ ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ನೀಡಿದ್ದಲ್ಲಿ ಸಂಬಂಧಪಟ್ಟವರಿಗೆ ಚಿನ್ನದ ಆಭರಣಗಳು, ಹಣ ಮರುಪಾವತಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್, ಪೋಲಿಸ್ ಸಿಬ್ಬಂದಿ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು.