ಹೊನ್ನಾಳಿ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ (Shri Raghavendra Swamy) ಮಠದ ಯಾತ್ರಾ ನಿವಾಸಿ ಕಟ್ಟಡ ಕಾಮಗಾರಿ ಈಗಾಗಲೇ 4.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು, ಮುಂದುವರಿದ ಈ ಯಾತ್ರಿ ನಿವಾಸದ ಪಾಕಶಾಲೆ ಕಾಂಪೌಂಡ್ ಹಾಗೂ ಪ್ರವೇಶ ದ್ವಾರದ ಕಾಮಗಾರಿಗಳಿಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೋಮವಾರ ಭೂಮಿಪೂಜೆಯನ್ನು (Bhumi Puja) ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂಲ ಮಂತ್ರಾಲಯದಷ್ಟೇ ಪ್ರಸಿದ್ಧಿ ಪಡೆದಿರುವ ದ್ವಿತೀಯ ಮಂತ್ರಾಲಯದ ಮಠ ನಮ್ಮ ಹೊನ್ನಾಳಿಯಲ್ಲಿರುವುದು ಈ ಭಾಗದ ಭಕ್ತರ ಪುಣ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Asia Cup 2023 : ಪಾಕಿಸ್ತಾನ ತಂಡಕ್ಕೆ ಆಘಾತ, ಮಾರಕ ವೇಗಿ ಟೂರ್ನಿಯಿಂದ ಔಟ್
ಲೋಕೋಪಯೋಗಿ ಇಲಾಖೆಯ ಅಭಿಯಂತರ ಕಣುಮಪ್ಪ ಮಾತನಾಡಿ, ಶ್ರೀ ರಾಘವೇಂದ್ರ ಸ್ವಾಮಿ ಮಠದ ಯಾತ್ರಾ ನಿವಾಸಿ ಕಟ್ಟಡ ಕಾಮಗಾರಿಗೆ 2016 -17 ರಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ಮಂಜೂರಾಗಿತ್ತು. ಇದರ ಜತೆಯಲ್ಲಿ ಮುಜರಾಯಿ ಇಲಾಖೆಯ ವತಿಯಿಂದ 75 ಲಕ್ಷ ನಂತರ ಸರ್ಕಾದಿಂದ ಮೊದಲ ಮಹಡಿಗೆ ಒಂದು ಕೋಟಿ, ಎರಡನೇ ಮಹಡಿಗೆ ಎರಡು ಕೋಟಿ ಹಣ ಮಂಜೂರಾಗಿತ್ತು ಈಗ ಮುಂದುವರೆದ ಕಾಮಗಾರಿಗೆ ಸರ್ಕಾರದಿಂದ ಹಣ ಮಂಜೂರಾತಿ ಆಗಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: SBI PO Recruitment 2023: 2000 ಪ್ರೊಬೇಷನರಿ ಹುದ್ದೆ ನೇಮಕಕ್ಕೆ ಎಸ್‌ಬಿಐ ಅರ್ಜಿ ಆಹ್ವಾನ, ಸೆ.27 ಅಪ್ಲೈಗೆ ಕೊನೆ ದಿನ
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಜಯರಾವ್, ನಾಗರಾಜ್ ಗುಂಡಣ್ಣ, ಉಮಾಕಾಂತ್ ಜೋಯಿಸ್ , ಕಾಂಗ್ರೆಸ್ ಪಕ್ಷದ ಮುಖಂಡ ಉಮಾಪತಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಪರಮೇಶ್ ಸೇರಿದಂತೆ ಭಕ್ತಾಧಿಗಳು ಹಾಜರಿದ್ದರು.