ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ (Ambedkar Jayanti 2024) ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದ ಗಾಯತ್ರಿ ಸಿದ್ದೇಶ್ವರ್ (Gayatri Siddheshwar) ಅವರು, ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ದಾವಣಗೆರೆಯ ಅಂಬೇಡ್ಕರ್ ನಗರದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಅನಿತ್ ಕುಮಾರ್ ಜಿ.ಎಸ್, ಜಿಲ್ಲಾಧ್ಯಕ್ಷ ರಾಜಶೇಖರ, ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ಎಸ್.ಟಿ. ವೀರೇಶ್, ಗೌರಮ್ಮಗಿರೀಶ್, ಆಲೂರ್ ನಿಂಗರಾಜ್, ರಾಜಪ್ಪ, ಗಂಗಾಧರ, ಶಿವಾನಂದ್ , ಶ್ರಿನಿವಾಸ್, ಮಂಜನಾಯ್ಕ್, ಕಡ್ಲಬಾಳು ಧನಂಜಯ್, ರಾಜನಹಳ್ಳಿ ಶಿವಕುಮಾರ್, ಹನುಮಂತ ನಾಯ್ಕ್, ಎಸ್.ಸಿ. ಘಟಕದ ಕಾರ್ಯಕರ್ತರು ಇದ್ದರು.
ಇನ್ನು ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲೂ ಗಾಯತ್ರಿ ಸಿದ್ದೇಶ್ವರ್ ಭಾಗವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಅನಿತ್ ಕುಮಾರ್ ಜಿ .ಎಸ್, ಜಿಲ್ಲಾಧ್ಯಕ್ಷ ರಾಜಶೇಖರ, ಪ್ರಸನ್ನ ಕುಮಾರ್, ಎಸ್ ಟಿ ವೀರೇಶ್, ಗೌರಮ್ಮಗಿರೀಶ್, ಸಂಗನ ಗೌಡರು, ಕಡ್ಲಬಾಳು ಧನಂಜಯ್ ಇದ್ದರು.
ಅದೇ ರೀತಿ ಗಾಂಧಿನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಜಿ.ಎಸ್.ಅನಿತ್ ಕುಮಾರ್, ಜಿಲ್ಲಾಧ್ಯಕ್ಷ ರಾಜಶೇಖರ, ಯಶವಂತ ರಾವ್ ಜಾದವ್, ರಾಜು, ನಿಂಗರಾಜ್, ರಾಜಪ್ಪ, ಗಂಗಾಧರ, ಶಿವಾನಂದ್, ಶ್ರಿನಿವಾಸ್, ಕಡ್ಲಬಾಳು , ರಾಜನಹಳ್ಳಿ ಶಿವಕುಮಾರ್, ಹನುಮಂತಪ್ಪ, ಎಸ್ಸಿ ಘಟಕದ ಕಾರ್ಯಕರ್ತರು, ಮುಖಂಡರು ಇದ್ದರು.
ಇದನ್ನೂ ಓದಿ | Parliament Flashback: ಭ್ರಷ್ಟಾಚಾರಕ್ಕೆ ಜನಾಕ್ರೋಶ; 1989ರ ಲೋಕಸಭೆಯಲ್ಲಿ 404ರಿಂದ 197ಕ್ಕೆ ಇಳಿದಿದ್ದ ಕಾಂಗ್ರೆಸ್ ಸೀಟುಗಳು!
ಶ್ರೀ ರಾಘವೇಂದ್ರ ದೇವಸ್ಥಾನಕ್ಕೆ ಭೇಟಿ
ದಾವಣಗೆರೆಯ ಶ್ರೀ ರಾಘವೇಂದ್ರ ದೇವಸ್ಥಾನಕ್ಕೆ ಗಾಯತ್ರಿ ಸಿದ್ದೇಶ್ವರ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ರಾಯರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಅನಿತ್ ಕುಮಾರ್ ಜಿ.ಎಸ್, ಗೌರಮ ಗಿರೀಶ್, ಗ್ಯಾರಿಳ್ಳಿ ಶಿವಣ್ಣ, ಜಯಮ್ಮ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.